ನಲಪಾಡ್ ಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ..! mohammed-haris-nalapad saaksha tv
ಮೊಹಮ್ಮದ್ ನಲಪಾಡ್ ಅವರನ್ನು ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ, ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಇಂದು ರಕ್ಷಾ ರಾಮಯ್ಯ ಅಧಿಕಾರದ ಅವಧಿ ಮುಕ್ತಾಯವಾಗಿದ್ದು, ಈ ಸ್ಥಾನಕ್ಕೆ ಮೊಹ್ಮದ್ ನಲಪಾಡ್ ಅವರನ್ನ ನೇಮಕ ಮಾಡಲಾಗಿದೆ.
ಕಳೆದ ಬಾರಿ ಚುನಾವಣೆ ನಡೆದಾಗ ಮೊಹಮ್ಮದ್ ನಲಪಾಡ್ ಅವರಿಗೆ ಅತಿ ಹೆಚ್ಚು ಮತಗಳು ಬಂದಿದ್ದವು.
ಆದರೆ, ಕೆಲ ಕಾರಣಗಳಿಂದಾಗಿ ನಲಪಾಡ್ ಅದ್ಯಕ್ಷ ಸ್ಥಾನ ಕೈತಪ್ಪಿತ್ತು.
ಹೀಗಾಗಿ ನಲಪಾಡ್ ಬಳಿಕ ಅತಿ ಹೆಚ್ಚು ಮತಗಳನ್ನು ಪಡೆದಿದ್ದ ರಕ್ಷ ರಾಮಯ್ಯ ಕೆಪಿಸಿಸಿ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
ಇಂದಿಗೆ ಅವರ ಅವಧಿ ಮುಗಿದಿದ್ದು, ನಲಪಾಡ್ ಅವರನ್ನು ಯೂತ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.









