Mohammed Siraj : ವಿಶ್ವದ ನಂಬರ್ 1 ಬೌಲರ್ ಸ್ಥಾನಕ್ಕೇರಿದ ಹೈದ್ರಾಬಾದ್ ಎಕ್ಸ್ ಪ್ರೆಸ್…
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಪ್ರಮುಖ ವಿಕೆಟ್ ಟೇಕರ್ ಅಗಿ ಮಿಂಚಿದ್ದ ಮೊಹಮ್ಮದ್ ಸಿರಾಜ್ ಇದೀಗ ವಿಶ್ವದ ನಂಬರ್ ಒನ್ ಬೌಲರ್ ಎನಿಸಿಕೊಂಡಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ಇತ್ತೀಚಿನ ODI ರ್ಯಾಂಕಿಗ್ ನಲ್ಲಿ ಮೊಹಮ್ಮದ್ ಸಿರಾಜ್ ಮೊದಲ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.
ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಸೀರಿಸ್ ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನಡೆಸಿದ ಹೈದ್ರಾಬಾದ್ ಎಕ್ಸ್ ಪ್ರೆಸ್ ಪ್ರಯತ್ನಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಲಂಕಾ ವಿರುದ್ಧದ ಮೂರು ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದ ಸಿರಾಜ್ ನ್ಯೂಜಿಲೆಂಡ್ ಸರಣಿಯಲ್ಲಿ 7 ವಿಕೆಟ್ ಪಡೆದಿದ್ದಾರೆ.
ಈ ಮೂಲಕ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಅವರನ್ನು ಹಿಂದಿಕ್ಕಿ ಸಿರಾಜ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಸಿರಾಜ್ ಏಕದಿನ ಮಾದರಿಯಲ್ಲಿ ನಂಬರ್ ಒನ್ ಆಗಿರುವುದು ಇದೇ ಮೊದಲು. ಇನ್ನೂ ನ್ಯೂಜಿಲೆಂಡ್ ತಂಡವನ್ನ ವೈಟ್ ವಾಷ್ ಮಾಡುವ ಮೂಲಕ ಸರಣಿ ಗೆದ್ದ ಭಾರತ ಏಕದಿನ ಮತ್ತು ಟಿ 20 ಮಾದರಿಯಲ್ಲಿ ನಂಬರ್ 1 ತಂಡ ಎಂದೆನಿಸಿಕೊಂಡಿದೆ.
Mohammed Siraj: World’s number 1 bowler Hyderabad Express…








