ಭಾರತೀಯರಲ್ಲಿ ಹಿಂದುತ್ವದ ಭಾವನೆಯೂ ಕುಸಿಯುತ್ತಿದೆ : ಮೋಹನ್ ಭಾಗವತ್ mohan-bhagwat saaksha tv
ಭೋಪಾಲ್ : ಭಾರತೀಯರಲ್ಲಿ ಹಿಂದುತ್ವದ ಭಾವನೆಯೂ ಕುಸಿಯುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಆತಂಕ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಮಾತನಾಡಿದ ಅವರು, ಹಿಂದೂಗಳಿಲ್ಲದೆ ಭಾರತವಿಲ್ಲ ಮತ್ತು ಭಾರತವಿಲ್ಲದೆ ಹಿಂದೂಗಳಿಲ್ಲ.
ಭಾರತ ಮತ್ತು ಹಿಂದೂಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಭಾರತವು ಸಂಸ್ಕøತಿ, ಆಚಾರ-ವಿಚಾರದಲ್ಲಿ ಸ್ವಂತಿಕೆಯನ್ನು ಹೊಂದಿದೆ. ಅದು ಹಿಂದುತ್ವದ ಸಾರವಾಗಿದೆ. ಹೀಗಾಗಿ ಭಾರತ ಹಿಂದೂಗಳ ದೇಶವಾಗಿದೆ.
ಆದ್ರೆ ಪ್ರಸ್ತುತ ಹಿಂದೂಗಳ ಸಂಖ್ಯೆ ಕ್ಷೀಣಿಸಿದೆ. ಭಾರತೀಯರಲ್ಲಿ ಹಿಂದುತ್ವದ ಭಾವನೆಯೂ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಭಾಗವತ್, ಹಿಂದೂಗಳು ಹಿಂದೂಗಳಾಗಿಯೇ ಉಳಿದರೆ ಭಾರತವು ಅಖಂಡವಾಗುತ್ತದೆ ಎಂದು ತಿಳಿಸಿದ್ದಾರೆ.