ಮತ್ತೊಬ್ಬ ನಟರು ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಮಾಲಿವುಡ್ ನ ಖ್ಯಾತ ನಟ ನಿರ್ಮಲ್ ಬೆನ್ನಿ (Nirmal Benny) ಶುಕ್ರವಾರ ಹೃದಯಾಘಾತಕ್ಕೆ (Heart Attack) ಬಲಿಯಾಗಿದ್ದಾರೆ. ಕೇವಲ 37ನೇ ವಯಸ್ಸಿಗೆ ನಿಧನರಾಗಿರುವ ನಟನಿಗೆ ಮಲಯಾಳಂ ಚಿತ್ರರಂಗ (Mollywood) ಕಣ್ಣೀರು ಸುರಿಸಿದೆ.
ನಟ ನಿರ್ಮಲ್ 12 ವರ್ಷಗಳಲ್ಲಿ 5 ಸಿನಿಮಾಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದರು. ಆದರೆ, ಇಂದು ಬೆಳಿಗ್ಗೆ ಏಕಾಏಕಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ನಟನ ನಿಧನದ ಸುದ್ದಿಯನ್ನು ಆಪ್ತ ಸ್ನೇಹಿತ ಮತ್ತು ನಿರ್ಮಾಪಕ ಸಂಜಯ್ ಪಡಿಯೂರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
2012ರಲ್ಲಿ ನಿರ್ಮಲ್ ಚಿತ್ರರಂಗಕ್ಕೆ ಕಾಲಿಟ್ಟರು. ನವಗತರ್ಕ್ ಸ್ವಾಗತಂ, ಅಮೆನ್ ಚಿತ್ರದಲ್ಲಿನ ಕೊಚ್ಚನ ಹೆಸರಿನ ಪಾತ್ರ ಮಾಡಿ ಸಾಕಷ್ಟು ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದರು.








