ಸೋಮವಾರ ಸಂಪುಟ ಸಭೆ Cabinet meeting : ರಾಜ್ಯದಲ್ಲಿ ಇನ್ನಷ್ಟು ಕಠಿಣ ನಿಯಮ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ತಡೆಗೆ ಸರ್ಕಾರ ನೈಟ್ ಕಫ್ರ್ಯೂ, ವೀಕೆಂಡ್ ಕಫ್ರ್ಯೂ ಮೊರೆ ಹೋಗಿದ್ದು, ಇನ್ನಷ್ಟ ಬಿಗಿ ನಿಯಗಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.
ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸುಳಿವು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು, ಸೋಮವಾರ ಸಚಿವ ಸಂಪುಟ ಸಭೆ ಇದೆ. ಅಲ್ಲಿ ಎಲ್ಲಾ ನಾಯಕರು, ಸಂಪುಟ ಸದಸ್ಯರು ಸೇರಿ ಮಾತನಾಡಲಿದ್ದೇವೆ.
ಅಂತಿಮವಾಗಿ ಇನ್ನಷ್ಟು ಕಠಿಣ ಕ್ರಮದ ಬಗ್ಗೆ ನಿರ್ಧಾರವಾಗಲಿದೆ. ಆರೋಗ್ಯ ಇಲಾಖೆಯಿಂದ ಯಾವುದೆಲ್ಲ ಸಲಹೆ ನೀಡಬೇಕೋ ಅದನ್ನು ಕೊಡ್ತೇವೆ ಎಂದು ತಿಳಿಸಿದ್ದಾರೆ.
ಸಚಿವರ ಈ ಹೇಳಿಕೆಯನ್ನು ಗಮನಿಸಿದರೇ ಸೋಮವಾರದ ಬಳಿಕ ರಾಜ್ಯದಲ್ಲಿ ಇನ್ನಷ್ಟು ಕಠಿಣ ನಿಯಮಗಳು ಜಾರಿಗೆ ಬರಲಿವೆ ಅನ್ನೋದು ತಿಳಿಯುತ್ತಿದೆ.
ಮೂಲಗಳ ಪ್ರಕಾರ ಈಗಿರುವ ವೀಕೆಂಡ್ ಕಫ್ರ್ಯೂ ಅನ್ನೇ ವಾರ ಪೂರ್ತಿ ವಿಧಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.










