ಶಾಲೆಗಳನ್ನು ಪ್ರಾರಂಭ ಮಾಡುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಪೋಷಕರ ಅಭಿಪ್ರಾಯ ಪಡೆದ ನಂತರ ತೀರ್ಮಾನ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಇಂದು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳ ಪ್ರಾರಂಭದ ಬಗ್ಗೆ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯುತ್ತೇವ.ಆನ್ ಲೈನ್ ಕ್ಲಾಸಸ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಆಗುತ್ತದೆ ಎಂಬುದು ಸಾರ್ವತ್ರಿಕ ಅಭಿಪ್ರಾಯವಿದೆ. ಬಹುತೇಕ ಜನರು ಮಕ್ಕಳನ್ನು ಶಾಲೆಗೆ ಕಳಿಸಲು ಸಿದ್ದರಿಲ್ಲ. ಆನ್ಲೈನ್ ಶಿಕ್ಷಣ ಒಂದು ಗೀಳಾಗಿದೆ. ಆದರೆ ಮಕ್ಕಳ ವಯಸ್ಸು, ತರಗತಿ ಇಂಪಾರ್ಟೆಂಟ್. LKG, UKG ಮಕ್ಕಳು ಆಟ ಆಡಬೇಕೇ ಹೊರತು. ಮೊಬೈಲ್, ಲ್ಯಾಪ್ಟಾಪ್ ಮುಂದೆ ಕೂಡಬಾರದು. ಯಾವುದೇ ಕಾರಣಕ್ಕೂ ಈ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಕೊಡಬಾರದು. ಯಾವ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಕೊಡಬೇಕೆಂದು ಸೋಮವಾರ ತೀರ್ಮಾನ ಮಾಡುತ್ತೇವೆ.
ಇದೆ ವೇಳೆ ಮಾತು ಮುಂದುವರೆಸಿದ ಅವರು, ಪಿಯು ಉಪನ್ಯಾಸಕರ ಆಯ್ಕೆ ಪಟ್ಟಿ ಪ್ರಕಟಿಸಿದ್ದೇವೆ. ಆದೇಶ ಕೊಡಬೇಕಿದೆ. ಕೌನ್ಸಲಿಂಗ್ ಮಾಡಬೇಕಿದೆ. ನಂತರ ಆದೇಶ ಕಾಪಿ ಕೊಡುತ್ತೇವೆ. ಆರ್.ಟಿ. ಇ. ಬಾಕಿ ಹಣ ಹಾಕುವ ವಿಚಾರದಲ್ಲಿ 275 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹಣ ಬಂದಾಗ ಶಿಕ್ಷಕರ ವೇತನ ನೀಡಲು ಬಳಸಿಕೊಳ್ಳಲಿ. ಈ ವಿಚಾರದಲ್ಲಿ ಸರಕಾರ ಯಾವುದೇ ರೀತಿಯ ಖಾಸಗಿ ಲಾಬಿಗೆ ಮಣಿದಿಲ್ಲಾ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.








