ಕೋಲಾರ : ಇಲ್ಲಿಯ ಹಂಚಾಳ ಹತ್ತಿರ ಕಾರಿನಲ್ಲಿ ಕೋಟಿ ಕೋಟಿ ರೂ. ಹಣ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹಂಚಾಳ ಹತ್ತಿರದ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ನ ವಿಲ್ಲಾದಲ್ಲಿದ್ದ ಕಾರಿನಲ್ಲಿ ಒಟ್ಟು 4 ಕೋಟಿ ರೂ.ಗೂ ಅಧಿಕ ನಗದು ಪತ್ತೆಯಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಎಂಬುವರಿಗೆ ಸೇರಿದ ವಿಲ್ಲಾ ಇದಾಗಿದೆ ಎನ್ನಲಾಗಿದೆ.
ಆದರೆ, ವಿಲ್ಲಾ ಬಳಿ ಬಿಟ್ಟು ಹೋಗಿದ್ದ ಕಾರಿನಲ್ಲಿ 3 ಗೋಣಿ ಚೀಲದಲ್ಲಿ ಕೋಟಿ ಕೋಟಿ ರೂ. ಇತ್ತು ಚುನಾವಣಾಧಿಕಾರಿಗಳು, ಪೊಲೀಸರ ದಾಳಿಯ ಸಂದರ್ಭದಲ ಹಿನ್ನೆಲೆಯಲ್ಲಿ ವಿಲ್ಲಾ ಹತ್ತಿರ ಕಾರು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕೆಜಿಎಫ್ ಎಸ್ಪಿ ಧರಣಿದೇವಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆದಿದ್ದರು.








