Monkey pox | ಮಂಕಿ ಪಾಕ್ಸ್ – ಚಿಕನ್ ಪಾಕ್ಸ್ – ಲಕ್ಷಣಗಳೇನು..?
ಕೊರೊನಾ ಸೋಂಕಿನ ಕಾಟ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿಯೇ ಮಂಕಿಪಾಕ್ಸ್ ವೈರಸ್ ಭಯ ಶುರುವಾಗಿದೆ. ಕೇವಲ ಆಫ್ರಿಕಾಗೆ ಸೀಮಿತವಾಗಿದ್ದ ಈ ವೈರಸ್, ಯೂರೋಪ್, ಅಮೆರಿಕಾ ಖಂಡಗಳಲ್ಲಿ ಕಾಣಿಸಿಕೊಂಡಿದೆ. ಈಗ ಭಾರತದಲ್ಲೂ ಮಂಕಿ ಪಾಕ್ಸ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕೇರಳದಲ್ಲಿ ಒಬ್ಬರು ಕೊನೆಯುಸಿರೆಳೆದಿದ್ದಾರೆ.
ಈ ನಡುವೆ ಮಂಕಿಪಾಕ್ಸ್ ಶಂಕಿತ ರೋಗಲಕ್ಷಣಗಳು.. ಎಂದು ದೇಶದ ಮೂಲೆ ಮೂಲೆಯಲ್ಲಿ ಕೇಳಿಬರುತ್ತಿದೆ. ಇದರೊಂದಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡವರಿಗೆ ಮಂಕಿಪಾಕ್ಸ್ ತಾಕಿದ್ಯಾ ಎಂಬ ಅನುಮಾನದೊಂದಿಗೆ ಅಧಿಕಾರಿಗಳು ಶಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸುತ್ತಿದ್ದಾರೆ. ಆದ್ರೆ ಅಲ್ಲಿ ನೆಗೆಟಿವ್ ಎಂದು ಬರುತ್ತಿದೆ. ಅಲ್ಲದೇ ಅದು ಚಿಕನ್ ಪಾಕ್ಸ್ ಎಂದು ತಿಳಿದು ಬಂದಿದೆ. ಕರ್ನಾಟಕ, ಆಂಧ್ರಪದೇಶ, ತೆಲಂಗಾಣ, ರಾಜಸ್ತಾನ್, ಉತ್ತರ ಪ್ರದೇಶ ರಾಜ್ಯಗಳಲ್ಲಿ ವೈರಸ್ ಭಯದಿಂದ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿದೆ. ಅವೆಲ್ಲಾ ಚಿಕನ್ ಪಾಕ್ಸ್ ಸೋಂಕು ಕೇಸ್ ಗಳಾಗಿವೆ.
ಆದ್ರೆ ಮಂಕಿಪಾಕ್ಸ್ ರೋಗಲಕ್ಷಗಳು ಚಿಕೆನ್ ಪಾಕ್ಸ್ ತರಹ ಇರುವುದರಿಂದ ಜನರಲ್ಲಿ ಗೊಂದಲ ಶುರುವಾಗಿದೆ. ಮಳೆಯ ಕಾರಣ ಚಿಕೆನ್ ಪಾಕ್ಸ್ ಕಾಣಿಸಿಕೊಳ್ಳುತ್ತಿದೆ. ಹಾಗಾದ್ರೆ ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ರೋಗ ಲಕ್ಷಣಗಳ ನಡುವೆ ಇರುವ ವ್ಯತ್ಯಾಸವೇನು..?

ಚಿಕನ್ ಪಾಕ್ಸ್ ಲಕ್ಷಣಗಳು : monkey pox chickenpox difference
ಮೊದಲು ಅಲರ್ಜಿ ಯಂತಹ ದದ್ದುಗಳು ಶುರುವಾಗುತ್ತವೆ
ಆ ನಂತರ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ
ಚಿಕನ್ ಪಾಕ್ಸ್ ನಲ್ಲಿ ದದ್ದುಗಳು ಸಣ್ಣಮಟ್ಟಿಗಿರುತ್ತವೆ, ಆದ್ರೆ ವಿಪರೀತ ತುರಿಕೆ ಇರುತ್ತದೆ
ಅಂಗೈಯಲ್ಲಿ ಮತ್ತು ಪಾದಗಳಲ್ಲಿ ದದ್ದುಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ
ಚಿಕನ್ ಪಾಕ್ಸ್ ನಿಂದ ಉಂಟಾಗುವ ದದ್ದುಗಳು..ಏಳೆಂಟು ದಿನಗಳ ನಂತರ ಕಡಿಮೆಯಾಗುತ್ತವೆ
ಮಂಕಿಪಾಕ್ಸ್ ಲಕ್ಷಣಗಳು : monkey pox chickenpox difference
ಮೊದಲು ಜ್ವರ, ತಲೆನೋವು, ಕೆಲವರಲ್ಲಿ ಕೆಮ್ಮು, ಗಂಟಲು ನೋವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ
ಸುಮಾರು ನಾಲ್ಕು ದಿನಗಳ ನಂತರ ದದ್ದುಗಳು ಕಾಣಿಸಿಕೊಳ್ಳುತ್ತವೆ
ಮಂಕಿಪಾಕ್ಸ್ ನಲ್ಲಿ ದದ್ದುಗಳು ದೊಡ್ಡದಾಗಿರುತ್ತದೆ, ತುರಿಕೆ ಜಾಸ್ತಿ ಇರುತ್ತದೆ
ಗುಳ್ಳೆಗಳು ಮೊದಲು ಕೈ ಮತ್ತು ಕಣ್ಣುಗಳ ಮೇಲೆ ಉಂಟಾಗುತ್ತವೆ, ನಂತರ ದೇಹದಾದ್ಯಂತ ಹರಡುತ್ತವೆ.
ಮಂಕಿ ಪಾಕ್ಸ್ನಲ್ಲಿ, ಅರ್ಧದಷ್ಟು ಕೈ ಮತ್ತು ಕಾಲುಗಳಲ್ಲಿ ದದ್ದು ಉಂಟಾಗುತ್ತದೆ
ತುಂಬಾ ಮಂದಿಯಲ್ಲಿ 21 ದಿನಗಳವರೆಗೂ ದದ್ದುಗಳು ಬರುತ್ತವೆ
ಜ್ವರವೂ ಹಲವು ದಿನಗಳವರೆಗೆ ಇರುತ್ತದೆ ಎನ್ನುತ್ತಾರೆ ವೈದ್ಯರು
ಮಂಕಿ ಪಾಕ್ಸ್ ಮತ್ತು ಚಿಕನ್ ಪಾಕ್ಸ್ ಎರಡೂ ಅಪಾಯಕಾರಿಯಲ್ಲ ಮತ್ತು ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಸ್ಪಷ್ಟಪಡಿಸಿದ್ದಾರೆ. ಎರಡರಲ್ಲಿ ಯಾವುದಾದರೂ ರೋಗಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.








