ನವದೆಹಲಿ: ದೇಶದಲ್ಲಿ ಕೂಡ ಮಂಕಿಪಾಕ್ಸ್ ಕೇಸ್ ಪತ್ತೆಯಾಗಿದ್ದು, ಆತಂಕ ವ್ಯಕ್ತವಾಗುತ್ತಿದೆ.
ಆಫ್ರಿಕನ್ ದೇಶದಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ (Monkeypox) ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Health Ministry) ಹೇಳಿದೆ. ಹೀಗಾಗಿ ಶಂಕಿತ ವ್ಯಕ್ತಿಯಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಮಾದರಿ ಪರೀಕ್ಷೆ ಬಳಿಕ ಮಂಕಿಪಾಕ್ಸ್ ದೃಢಪಟ್ಟಿರುವುದಾಗಿ ಸಚಿವಾಲಯ ಹೇಳಿದೆ.
ಪಶ್ಚಿಮ ಆಫ್ರಿಕಾದ ಕ್ಲಾಡ್-2ನ Mpox ವೈರಸ್ ಇರುವಿಕೆಯನ್ನು ಪ್ರಯೋಗಾಲಯ ಪರೀಕ್ಷೆ ದೃಢಪಡಿಸಿದೆ. ಈ ಹಿನ್ನೆಲೆ ಅವರನ್ನು ಪ್ರತ್ಯೇಕವಾಗಿ ಇಡಲಾಗಿದೆ. ಸೋಂಕಿತ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸದೆ, ರೋಗಿಯು ಸ್ಥಿರವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2022ರ ಜುಲೈ ತಿಂಗಳಲ್ಲಿ ಕೇರಳದಲ್ಲಿ 3 ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು. ಈಗ ಮತ್ತೆ ಅದರ ಆತಂಕ ಶುರುವಾಗಿದೆ.