Monkeypox ಸೋಂಕನ್ನ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ WHO
ಕರೋನಾ ಸಾಂಕ್ರಾಮಿಕದಿಂದ ಹೊರಬರುವ ಮುನ್ನವೇ ಜಗತ್ತು ಇನ್ನೊಂದು ಮಹಾಮಾರಿಗೆ ಆತಂಕಪಡುವ ಪರಿಸ್ಥಿತಿ ಬಂದೊದಗಿದೆ. ದೆಹಲಿಯಲ್ಲಿಂದು ಭಾರತದ ನಾಲ್ಕನೆ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಯಾವುದೇ ಪ್ರಯಾಣದ ಹಿಸ್ಟರಿ ಇಲ್ಲದೆ ಇದ್ದರು ಸೋಂಕಿಗೆ ತುತ್ತಾಗಿರುವುದು ಆತಂಕವನ್ನ ಹೆಚ್ಚಿಸಿದೆ. ಇನ್ನೊಂದೆಡೆ ವಿಶ್ವ ಆರೋಗ್ಯ ಸಂಸ್ಥೆ (WHO) ಮಂಕಿಪಾಕ್ಸ್ ಸೋಂಕನ್ನ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. WHO, ಸುದೀರ್ಘ ಚರ್ಚೆಯನ್ನ ನಡೆಸಿ ಈ ನಿರ್ಧಾರವನ್ನ ತೆಗೆದುಕೊಂಡಿದೆ. ಮಂಕಿಪಾಕ್ಸ್ ಇದುವರೆಗೆ 80 ದೇಶಗಳಿಗೆ ಹರಡಿದ್ದು, ಭಾರತದಲ್ಲಿ ಈವರೆಗೆ 4 ವೈರಸ್ ಪ್ರಕರಣಗಳು ವರದಿಯಾಗಿವೆ.
ಮತ್ತೊಂದೆಡೆ, ಅಮೆರಿಕದಲ್ಲಿ ಮೊದಲ ಬಾರಿಗೆ ಇಬ್ಬರು ಮಕ್ಕಳಲ್ಲಿ ಈ ಸೋಂಕು ಪತ್ತೆಯಾಗಿದೆ. ಆರೋಗ್ಯ ಸಂಸ್ಥೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಪ್ರಕಾರ, ಕ್ಯಾಲಿಫೋರ್ನಿಯದಲ್ಲಿ ಒಂದು ಮಗುವಿಗೆ ಮತ್ತು ಅಮೆರಿಕಾ ನಿವಾಸಿ ಅಲ್ಲದ ಮತ್ತೊಂದು ನವಜಾತ ಶಿಶುವಿನಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿದೆ. ಇಬ್ಬರೂ ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಸ್ಪರ್ಶದಿಂದ ಹರಡುತ್ತೆ ಮಂಕಿಪಾಕ್ಸ್..
ಬ್ರಿಟನ್‌ನಲ್ಲಿ ಈ ವರ್ಷ ಮೇ 6 ರಂದು ಮಂಗನ ಕಾಯಿಲೆಯ ಮೊದಲ ಪ್ರಕರಣ ಕಂಡುಬಂದಿತ್ತು. ಪುರುಷರೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದ ಯುವಕರಲ್ಲಿ ಹೆಚ್ಚಿನ ಸೋಂಕು ಕಂಡುಬಂದಿತ್ತು. ಸೋಂಕಿತ ರೋಗಿಯ ಚರ್ಮದ ಸಂಪರ್ಕದಿಂದ ಹರಡುವ ರೋಗ ಯಾರನ್ನ ಬೇಕಾದರೂಈ ಭಾಧಿಸಬಹುದು. ಇದಲ್ಲದೆ, ಸೋಂಕಿತ ವ್ಯಕ್ತಿಯ ಬಟ್ಟೆ, ಪಾತ್ರೆಗಳು ಮತ್ತು ಹಾಸಿಗೆಗಳ ಸಂಪರ್ಕಕ್ಕೆ ಬರುವ ಮೂಲಕವೂ ಮಂಕಿಪಾಕ್ಸ್ ಹರಡುತ್ತದೆ.
ಅಮೆರಿಕದಲ್ಲಿ ಹೆಚ್ಚಿದ ಲಸಿಕೆ ಬೇಡಿಕೆ
ಸಿಎನ್‌ಎನ್ ವರದಿ ಪ್ರಕಾರ, ಅಮೆರಿಕ ಸರ್ಕಾರ ಇದುವರೆಗೆ 3 ಲಕ್ಷಕ್ಕೂ ಹೆಚ್ಚು ಮಂಕಿಪಾಕ್ಸ್ ಲಸಿಕೆಗಳನ್ನ ಜನರಿಗೆ ನೀಡಿದೆ. CDC ಪ್ರಕಾರ, US ನಲ್ಲಿ 1.5 ಮಿಲಿಯನ್ ಜನರು ಲಸಿಕೆಗೆ ಅರ್ಹರಾಗಿದ್ದಾರೆ. ಪ್ರತಿಯೊಬ್ಬರಿಗೂ ಎರಡು ಡೋಸ್ ಜಿನ್ನಿಯೋಸ್ ಲಸಿಕೆ ನೀಡಲಾಗುವುದು.
ಜಗತ್ತಿನಲ್ಲಿ ಸುಮಾರು 17 ಸಾವಿರ ಮಂಕಿಪಾಕ್ಸ್ ಪ್ರಕರಣಗಳು
Monkeypoxmeter.com ನ ಮಾಹಿತಿಯ ಪ್ರಕಾರ, ಭಾರತ ಸೇರಿದಂತೆ 80 ದೇಶಗಳಲ್ಲಿ 16,886 ರೋಗಿಗಳಲ್ಲಿ ಸೋಂಕು ದೃಢಪಟ್ಟಿದೆ. ಇವರಲ್ಲಿ ಯೂರೋಪ್‌ನಲ್ಲಿ ಅತಿ ಹೆಚ್ಚು ಅಂದರೆ 11,985 ಮಂದಿ ಮಂಕಿಪಾಕ್ಸ್ ಗೆ ತುತ್ತಾಗಿದ್ದಾರೆ. ಬ್ರಿಟನ್, ಸ್ಪೇನ್, ಅಮೇರಿಕಾ, ಜರ್ಮನಿ, ಫ್ರಾನ್ಸ್, ಪೋರ್ಚುಗಲ್, ಕೆನಡಾ, ನೆದರ್ಲ್ಯಾಂಡ್ಸ್, ಇಟಲಿ ಮತ್ತು ಬೆಲ್ಜಿಯಂ ಸೋಂಕಿಗೆ ಒಳಗಾಗಿರುವ ಅಗ್ರ 10 ದೇಶಗಳು. ಮಂಕಿಪಾಕ್ಸ್ ನಿಂದಾಗಿ ಈ ವರ್ಷ ಮೂವರು ಸಾವನ್ನಪ್ಪಿದ್ದಾರೆ.
Monkeypox has been declared a global health emergency by the WHO