ಈಶಾನ್ಯ ರಾಜ್ಯಗಳಿಗೆ ಜೂನ್ 11, 12ರಂದು ಮುಂಗಾರು ಪ್ರವೇಶ

ಹೊಸದಿಲ್ಲಿ, ಜೂನ್ 9: ಈಶಾನ್ಯ ರಾಜ್ಯಗಳಿಗೆ ಜೂನ್ 11, 12 ರಂದು ಮುಂಗಾರು ಪ್ರವೇಶಿಸಲಿದೆ.
ಪಶ್ಚಿಮ ಬಂಗಾಳ, ಒಡಿಶಾ, ಸಿಕ್ಕಿಂ ಹಾಗೂ ಈಶಾನ್ಯ ರಾಜ್ಯಗಳ ಇತರ ಭಾಗಗಳಿಗೆ ಜೂನ್ 11 ಮತ್ತು 12 ರ ವೇಳೆಗೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪೂರ್ವ ಮಧ್ಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗುತ್ತಿದ್ದು, ಕಡಿಮೆ ಒತ್ತಡವಿರುವ ಪ್ರದೇಶಗಳಿಂದ ಮಾನ್ಸೂನ್ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆ ಇದೆ. ಹಾಗಾಗಿ ಬುಧವಾರದ ಹೊತ್ತಿಗೆ ಇದು ತೀವ್ರತೆ ಪಡೆಯಲಿದ್ದು ಮಳೆ ಸುರಿಯುವ ಸಾಧ್ಯತೆ ಇದೆ.
ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ಒಡಿಶಾ, ಪಶ್ಚಿಮ ಬಂಗಾಳದ ಕೆಲವು ಭಾಗಗಳಿಗೆ ಜೂನ್ 11 ಮತ್ತು12 ರ ಸಮಯದಲ್ಲಿ ಮುಂಗಾರು ಪ್ರವೇಶಿಸಲು ಪರಿಸ್ಥಿತಿ ಅನುಕೂಲವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.








