ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಮಾನ್ಸೂನ್ ರಾಗ – ಬಿಡುಗಡೆ ದಿನಾಂಕ ಮುಂದೂಡಿಕೆ..
ಸಿನಿ ಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಮಾನ್ಸೂನ್ ರಾಗ ಸಿನಿಮಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಡಾಲಿ ಧನಂಜಯ್ ಹಾಗು ರಚಿತಾ ರಾಮ್ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಚಿತ್ರ ಇದೇ ಆಗಸ್ಟ್ 19ರಂದು ರಾಜ್ಯಾದ್ಯಂತ ಬಿಡುಗಡೆ ಆಗಬೇಕಿತ್ತು. ಆದರೆ ಚಿತ್ರ ತಂಡ ಸಿನಿಮಾ ರಿಲೀಸ್ ದಿನಾಂಕವನ್ನ ಮುಂದೂಡಿದೆ.
ಈ ಚಿತ್ರದ ಹಿನ್ನೆಲೆ ಸಂಗೀತವನ್ನು ಮತ್ತಷ್ಟು ಚೆನ್ನಾಗಿ ಸುಧಾರಿಸುವ ಸಲುವಾಗಿ ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಜೊತೆಗೆ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಈ ಚಿತ್ರದ ಟೈಟಲ್ಗೆ ತಕ್ಕಂತೆ ಹೊಸ ರೀತಿಯು ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಒತ್ತು ಕೊಡುತ್ತಿರುವ ಕಾರಣ ಸಿನಿಮಾ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕಲಾಗಿದೆ ಎಂದು ಚಿತ್ರದ ನಿರ್ಮಾಪಕ ಎ.ಆರ್ ವಿಖ್ಯಾತ್ ತಿಳಿಸಿದ್ದಾರೆ.
ಈಗಾಗಲೇ ಬಿಡುಗಡೆಗೊಂಡಿರುವ ಮಾನ್ಸೂನ್ ರಾಗ ಚಿತ್ರದ ಟ್ರೈಲರ್ ಅನ್ನು ಮಿಲಿಯನ್ ಗಟ್ಟಲೆ ಜನರು ನೋಡಿದ್ದಾರೆ. ಹಾಡುಗಳು ಈಗಾಗಲೇ ಹಿಟ್ ಆಗಿವೆ. ಮತ್ತಷ್ಟು ಹಾಡುಗಳಿಗೆ ಒತ್ತು ಕೊಡುತ್ತಿರುವ ಕಾರಣ, ನಮ್ಮ ಸಿನಿಮಾ ಮುಂದಕ್ಕೆ ಹೋಗುತ್ತಿದೆ ಅಂತಾ ನಿರ್ದೇಶಕ ವೀರೇಂದ್ರನಾಥ್ ಹೆಳಿದ್ದಾರೆ.
ಈ ಚಿತ್ರದಲ್ಲಿ ರಚಿತಾ ರಾಮ್ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ವೇಶ್ಯೆಯನ್ನು ಪ್ರೀತಿಸುವ ಪ್ರೇಮಿಯಾಗಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್, ಸುಹಾಸಿನಿ ಮತ್ತು ಯಶಾ ಶಿವಕುಮಾರ್ ಕಾಣಿಸಿಕೊಂಡಿದ್ದಾರೆ.