ಮಂಗಳೂರು : ಮೂಡಬಿದ್ರೆಯ ಗೋಲ್ಡನ್ ಗೇಟ್ ಹೋಟೆಲ್ ನಲ್ಲಿ ಮಧ್ಯಾಹ್ನ ಊಟದ ಜೊತೆ ಕೊಟ್ಟ ಚಿಕನ್ ಕಬಾಬ್ ನಲ್ಲಿ ಹುಳಗಳು ಪತ್ತೆಯಾಗಿದ್ದು, ಹೋಟೆಲ್ ಸಿಬ್ಬಂದಿ ಜೊತೆ ಗ್ರಾಹಕರು ವಾಗ್ವಾದ ನಡೆಸಿದ್ದಾರೆ.
ಮಂಗಳೂರು ಹೊರವಲಯದ ಮೂಡಬಿದ್ರೆ ಬಳಿ ಈ ಹೋಟೆಲ್ ಇದ್ದು, ಇಂದು ಕುಟುಂಬವೊಂದು ಮಧ್ಯಾಹ್ನದ ಊಟಕ್ಕಾಗಿ ಅಲ್ಲಿಗೆ ಭೇಟಿ ನೀಡಿ ಊಟದ ಜೊತೆಗೆ ಚಿಕನ್ ಕಬಾಬ್ ಆರ್ಡರ್ ಮಾಡಿದ್ದಾರೆ. ಅದರಂತೆ ಹೋಟೆಲ್ ಸಿಬ್ಬಂದಿ ಕಬಾಬ್ ತಂದುಕೊಟ್ಟಿದ್ದಾರೆ. ಈ ವೇಳೆ ಕಬಾಬ್ ಅನ್ನು ಪರಿಶೀಸಿದಾಗ ಹುಳುಗಳು ಪತ್ತೆಯಾಗಿವೆ. ಇದರಿಂದ ಆಕ್ರೋಶಗೊಂಡ ಗ್ರಾಹಕರು ಈ ಬಗ್ಗೆ ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಅಲ್ಲಿನ ಸಿಬ್ಬಂದಿ ‘ಇದರಲ್ಲಿ ನಮ್ಮದೇನು ತಪ್ಪಿಲ್ಲ, ಇದು ಕೋಳಿ ಮಾರಾಟಗಾರರ ಯಡವಟ್ಟು’ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಗ್ರಾಹಕರು ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ.








