ಚಂದ್ರನ ಅತ್ಯದ್ಭುತ ಫೋಟೋ ಕ್ಲಿಕ್ಕಿಸಿ ನೆಟ್ಟಿಗರ ಮನಗೆದ್ದ 16 ವರ್ಷದ ಬಾಲಕ..!
ಚಂದ್ರ ಒಮ್ಮೊಮ್ಮೆ ಒಂದೊಂದು ರೀತಿಯಲ್ಲಿ ಕಾಣಿಸುತ್ತಾನೆ.. ಬಗೆ ಬಗೆಯ ರೀತಿಯ ಚಂದ್ರನ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ… ಇದೀಗ ಸೋಶಿಯಲ್ ಮೀಡಿಯಾದಲ್ಲಿ ರೆಡಿಟ್ ನಲ್ಲಿ ಚಂದ್ರನ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿವೆ.. ಚಂದ್ರನ ಇಷ್ಟು ಅದ್ಭುತ ಫೋಟೋ ಕ್ಲಿಕ್ಕಿಸಿರುವುದು ಕೇವಲ 16 ವರ್ಷದ ಬಾಲಕ ಎನ್ನುವ ವಿಚಾರ ನೆಟ್ಟಿಗರನ್ನ ದಂಗಾಗಿಸಿದೆ..
ಈ ಫೋಟೋಗಳು ಈವರೆಗಿನ ಅತ್ಯಂತ ಸ್ಪಷ್ಟ ಚಂದ್ರನ ಚಿತ್ರ ಎಂದು ಬಣ್ಣಿಸಲಾಗಿದೆ. ಪುಣೆಯ 16 ವರ್ಷದ ಪ್ರಥಮೇಶ್ ಜಾಜು ಎಂಬ ಬಾಲಕ ಈ ಫೋಟೋ ಕ್ಲಿಕ್ಕಿಸಿದ್ದಾನೆ.
ಫೋಟೋ ಶೇರ್ ಮಾಡುವ ಜೊತೆಗೆ ಈ ಬಗ್ಗೆ ಕಮೆಂಟ್ ನಲ್ಲಿ ವಿವರಣೆ ನೀಡಿದ್ದಾನೆ.
‘ಇದು ನಾನು ಈವರೆಗೆ ತೆಗೆದ ಅತ್ಯಂತ ಸ್ಪಷ್ಟವಾದ ಚಂದ್ರನ ಫೋಟೋವಾಗಿದೆ. ನಾನು 186 ಗಿಗಾಬೈಟ್ಸ್ ಸಾಮರ್ಥ್ಯದ 50 ಸಾವಿರಕ್ಕೂ ಹೆಚ್ಚು ಫೋಟೋಗಳನ್ನ ಕ್ಲಿಕ್ಕಿಸಿದೆ’ ಎಂದು ಹೇಳಿದ್ದಾರೆ.
ನಾನು ಮೊದಲು ಚಂದ್ರನ ಸಣ್ಣ ಸಣ್ಣ ಪ್ರದೇಶಗಳ ವಿಡಿಯೋಗಳನ್ನ ಮಾಡಿದೆ. ಪ್ರತಿಯೊಂದು ವಿಡಿಯೋ 2000 ಫ್ರೇಮ್ ಗಳನ್ನ ಹೊಂದಿತ್ತು. ಈ ಎಲ್ಲಾ ವಿಡಿಯೋಗಳನ್ನ ಸೇರಿಸಿ 1 ಫೋಟೋವನ್ನ ಮಾಡಲಾಯ್ತು. ಸುಮಾರು 38 ವಿಡಿಯೋಗಳನ್ನ ನಾನು ತೆಗೆದುಕೊಂಡೆ. ಇದೀಗ ನನ್ನ 38 ಫೋಟೋಗಳಿವೆ ಎಂದು ವಿವರಿಸಿದ್ದಾರೆ.
https://www.instagram.com/prathameshjaju/
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.