ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ತರಲು ಬಿಜೆಪಿ ಸರ್ಕಾರ ತೀವ್ರ ಕಸರತ್ತು ನಡೆಸಿರುವ ಬೆನ್ನಲ್ಲೇ, ಹಿರಿಯ ಸಾಹಿತಿ, ಚಿಂತಕ ಪ್ರೊ.ಕೆ.ಎಸ್ ಭಗವಾನ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.
ಭಾರತದಿಂದ ವಿದೇಶಕ್ಕೆ ಗೋಮಾಂಸ ರಫ್ತು ಮಾಡುವವರಲ್ಲಿ ಮೇಲ್ವರ್ಗದ ಬ್ರಾಹ್ಮಣರೇ ಹೆಚ್ಚು ಮಂದಿ ಇದ್ದಾರೆ ಎಂಬುದನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ಇಲ್ಲಿ ಗೋಹತ್ಯೆ ನಿಲ್ಲಿಸಿ ವಿದೇಶಗಳಿಗೆ ಗೋಮಾಂಸ ರಫ್ತು ಮಾಡುವ ಹುನ್ನಾರ ಗೋಹತ್ಯೆ ನಿಷೇಧ ಕಾಯ್ದೆಯ ಜಾರಿ ಹಿಂದೆ ಅಡಗಿದೆ ಎಂದು ಟೀಕಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಭಗವಾನ್, ಗೋಮಾಂಸ ರಫ್ತು ಪ್ರಮಾಣವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಗೋಹತ್ಯೆ ನಿಷೇಧಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ರೈತರು ವಯಸ್ಸಾದ ಹಸು, ಎಮ್ಮೆಗಳನ್ನು ಇಟ್ಟುಕೊಳ್ಳದೆ ಮಾರಿ ಬಿಡುತ್ತಾರೆ. ಕಾರಣ ಅವುಗಳ ನಿರ್ವಹಣೆ, ಮೇವು ಕೊಡುವುದು ಸೇರ ಆರ್ಥಿಕವಾಗಿ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಇಟ್ಟುಕೊಳ್ಳುವುದಿಲ್ಲ. ಹಸುಗಳ ವಿಚಾರದಲ್ಲಿ ರೈತರು ಯಾವುದೇ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿಲ್ಲ. ಇದನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು ಎಂದು ಕೆ.ಎಸ್ ಭಗವಾನ್ ಸಲಹೆ ನೀಡಿದ್ದಾರೆ.
ಅಮೆರಿಕದಲ್ಲಿ ಗೋಮಾಂಸಕ್ಕಾಗಿಯೇ ಹಸುಗಳನ್ನು ಸಾಕುತ್ತಾರೆ. ಅಲ್ಲಿ ಗೋಮಾಂಸಕ್ಕೆ ಹೆಚ್ಚಿನ ಬೆಲೆ ಇದೆ. ಹಾಗಾಗಿ ಇಲ್ಲಿನ ಬ್ರಾಹ್ಮಣರು ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ಗೋವು ಪವಿತ್ರ ಎಂದು ಹೇಳಿ ಗೋಹತ್ಯೆ ನಿಷೇಧ ಕಾನೂನನ್ನು ಜಾರಿ ಮಾಡಲು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ವಾಮಿ ವಿವೇಕಾನಂದರೇ ಗೋಮಾಂಸ ತಿನ್ನದವನು ನಿಜವಾದ ಬ್ರಾಹ್ಮಣನಲ್ಲ ಎಂದು ಹೇಳಿದ್ದಾರೆ.ಈ ಹಿಂದೆ ಬ್ರಾಹ್ಮಣರು ಮಾಡುವ ಯಜ್ಞ-ಯಗಾದಿಗಳಿಗೆ ಗೋವುಗಳನ್ನು ಕೊಲ್ಲಲಾಗುತ್ತಿತ್ತು. ಬ್ರಾಹ್ಮಣರೂ ಕೂಡ ದನದ ಮಾಂಸ ತಿನ್ನುತ್ತಿದ್ದರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿ ಯಾವುದೇ ಚರ್ಚೆ ನಡೆಸದೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವುದು ಸರಿಯಲ್ಲ ಎಂದರು.
ಶೂದ್ರರನ್ನು ಶೂದ್ರರೆಂದು ಕರೆದರೆ ಸಂತಸ ಪಡಬೇಕು ಎಂಬ ಸಂಸದೆ ಪ್ರಗ್ಯಾ ಠಾಕೂರ್ ಹೇಳಿಕೆಯನ್ನು ಖಂಡಿಸಿರುವ ಪ್ರೊ.ಭಗವಾನ್, ಪ್ರಗ್ಯಾಗೆ ಹಿಂದೂ ಧರ್ಮದ ಬಗ್ಗೆ ಅರಿವೇ ಇಲ್ಲ. ಹಿಂದೂ ಧರ್ಮವೆಂದರೆ ಕೇವಲ ಬ್ರಾಹ್ಮಣರ ಧರ್ಮವೇ ಹೊರತು ಬೇರೆಯವರದಲ್ಲ. ಜನಿವಾರ ಹಾಕಿಕೊಳ್ಳದ ಎಲ್ಲರೂ ಶೂದ್ರರು ಎಂದು ಮನುಸ್ಮುತಿಯಲ್ಲಿ ಉಲ್ಲೇಖಿಸಲಾಗಿದೆ. ಮನುಸ್ಮøತಿ ಪ್ರಕಾರ ಒಕ್ಕಲಿಗರು, ಲಿಂಗಾಯರು, ಕುರುಬರು ಹಾಗೂ ದಲಿತರೆಲ್ಲರೂ ಶೂದ್ರರೇ ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








