ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ನೂರಾರು ಗಿಳಿಗಳ ಸಾವು
ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಮರದಲ್ಲಿ ವಾಸವಿದ್ದ ನೂರಾರು ಗಿಳಿಗಳು ಮೃತ ಪಟ್ಟ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಸ್ಥಳೀಯರು ಗಿಳಿಗಳ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ರಾತ್ರಿಯ ಮಳೆಗೆ ಶ್ರೀರಂಗಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗದಲ್ಲಿದ್ದ ಬೃಹತ್ ಮರ ಧರೆಗುರುಳಿದೆ. ಮರ ಬುಡ ಸಹಿತ ಕೆಳಗೆ ಬಿದ್ದ ಪರಿಣಾಮ ಹಲವು ಗಿಳಿಗಳು ಮತ್ತು ಮರಿಗಳು ಮೃತಪಟ್ಟರೆ, ಉಳಿದವು ಆಲಿಕಲ್ಲುಗಳ ಪೆಟ್ಟು ತಾಳಲಾರದೆ ಗಾಯಗೊಂಡು ಮೃತಪಟ್ಟಿವೆ.
ನೂರಾರು ಗಿಳಿಗಳ ಸಾವು ಕಂಡು ಪಟ್ಟಣದ ಜನರು ಮರುಕ ವ್ಯಕ್ತಪಡಿಸಿದರು. ಮೃತ ಗಿಳಿಗಳನ್ನು ಗ್ರಾಮಸ್ಥರು ಸಾಮೂಹಿಕವಾಗಿ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ಮಾಡಿದರು.
More than 100 parrots die in Srirangapatna because of rain








