ಪ್ಯಾರೇ ದೇಶ್ ವಾಸಿಯೋ : 2020ರಲ್ಲಿ ದೇಶದ 10 ಸಾವಿರ ಕಂಪನಿಗಳ ಬಾಗಿಲು ಬಂದ್ (companies)
ನವದೆಹಲಿ : ಕೊರೊನಾ, ಲಾಕ್ ಡೌನ್ ದಿಂದಾಗಿ ದೇಶದ ಆರ್ಥಿಕತೆ ಮಕಾಡೆ ಮಲಗಿಬಿಟ್ಟಿದೆ. ಸದ್ಯ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡರೂ ಜನ ಸಾಮಾನ್ಯರ ಬದುಕು ಮಾತ್ರ ಬೀದಿಯಲ್ಲೇ ಇದೆ.
ಈ ಮಧ್ಯೆ ಕಳೆದ ವರ್ಷದ ಏಪ್ರಿಲ್ ಈ ವರ್ಷ ಫೆಬ್ರವರಿ ನಡುವೆ ದೇಶದಲ್ಲಿ 10,000ಕ್ಕೂ ಹೆಚ್ಚು ಕಂಪನಿಗಳು ಸ್ವಯಂಪ್ರೇರಣೆಯಿಂದ ಬಾಗಿಲು ಹಾಕಿಕೊಂಡಿವೆ ಎಂದು ಸರ್ಕಾರ ಹೇಳಿದೆ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಲಭ್ಯವಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು 2,394 ಕಂಪನಿಗಳು ಮುಚ್ಚಲ್ಪಟ್ಟಿವೆ.
ಉತ್ತರ ಪ್ರದೇಶದಲ್ಲಿ 1,936 ಕಂಪನಿಗಳು ಬಾಗಿಲು ಹಾಕಿಕೊಂಡಿದ್ದರೇ ತಮಿಳುನಾಡಿನಲ್ಲಿ 1,322, ಮಹಾರಾಷ್ಟ್ರದಲ್ಲಿ 1,279, ಕರ್ನಾಟಕದಲ್ಲಿ 836, ಚಂಡೀಗಢದಲ್ಲಿ 501,
ರಾಜಸ್ಥಾನದಲ್ಲಿ 479, ತೆಲಂಗಾಣದಲ್ಲಿ 404, ಕೇರಳದಲ್ಲಿ 307, ಜಾಖರ್ಂಡ್ನಲ್ಲಿ 137, ಮಧ್ಯಪ್ರದೇಶದಲ್ಲಿ 111 ಮತ್ತು ಬಿಹಾರದಲ್ಲಿ 104 ಸ್ವಯಂಪ್ರೇರಣೆಯಿಂದ ಮುಚ್ಚಿವೆ.