ಪಿಎಂಜೆಡಿವೈ ಯೋಜನೆಯಿಂದ 40.35 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನವಾಗಿದೆ – ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ, ಅಗಸ್ಟ್28: ಆರು ವರ್ಷಗಳ ಹಿಂದೆ ಆರ್ಥಿಕ ಸೇರ್ಪಡೆಗಾಗಿ ರಾಷ್ಟ್ರೀಯ ಧ್ಯೇಯವಾಗಿ ಪ್ರಾರಂಭಿಸಲಾದ ಪ್ರಧಾನ್ ಮಂತ್ರಿ ಜನ ಧನ ಯೋಜನೆ (ಪಿಎಂಜೆಡಿವೈ) ಯಿಂದ 40.35 ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ.
![]()
ಪ್ರಧಾನಿ ನರೇಂದ್ರ ಮೋದಿ ಅವರು 2014 ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಘೋಷಿಸಿದ ಜನ ಧನ್ ಯೋಜನೆ, ಅದೇ ವರ್ಷದಲ್ಲಿ ಆಗಸ್ಟ್ 28 ರಂದು ಪ್ರಾರಂಭವಾಯಿತು.

ಮೋದಿ ಸರ್ಕಾರದ ಜನ ಕೇಂದ್ರಿತ ಆರ್ಥಿಕ ಉಪಕ್ರಮಗಳಿಗೆ ಪಿಎಂಜೆಡಿವೈ ಅಡಿಪಾಯವಾಗಿದೆ ಎಂದು ಸೀತಾರಾಮನ್ ಯೋಜನೆಯ ಆರನೇ ವಾರ್ಷಿಕೋತ್ಸವದಂದು ಹೇಳಿದರು.
ಬಡವರಿಗೆ ತಮ್ಮ ಉಳಿತಾಯವನ್ನು ಔಪಚಾರಿಕ ಹಣಕಾಸು ವ್ಯವಸ್ಥೆಗೆ ತರಲು ಇದು ಒಂದು ಮಾರ್ಗವನ್ನು ಒದಗಿಸಿದೆ. ಹಳ್ಳಿಗಳಲ್ಲಿನ ಅವರ ಕುಟುಂಬಗಳಿಗೆ ಹಣವನ್ನು ರವಾನಿಸುವ ಮಾರ್ಗವಾಗಿದ್ದು, ಬಡ್ಡಿ ಹಣ ನೀಡುವವರ ಹಿಡಿತದಿಂದ ರಕ್ಷಿಸಿದೆ ಎಂದು ಅವರು ಹೇಳಿದರು.

ಹಣಕಾಸು ಸೇರ್ಪಡೆ ಸರ್ಕಾರದ ರಾಷ್ಟ್ರೀಯ ಆದ್ಯತೆಯಾಗಿದ್ದು, ಇದು ಸಮಗ್ರ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.








