Mosquito Liquid | ಸೊಳ್ಳೆನಾಶಕ ಲಿಕ್ವಿಡ್’ಗೆ 2 ವರ್ಷದ ಮಗು ಬಲಿ!
ಹೊನ್ನಾವರದ ಕಾವೂರಿನಲ್ಲಿ ನಡೆದ ಘಟನೆ
ಆರವ್ ಮಹೇಶ್ ಮೃತ ಮಗು
ಗುಡ್ ನೈಟ್ ದ್ರವ ಕುಡಿದು ಮಗು ಸಾವು
ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಕಾರವಾರ : ಸೊಳ್ಳೆನಾಶಕ ಲಿಕ್ವಿಡ್ ಕುಡಿದು ಎರಡು ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟೆನ ಹೊನ್ನಾವರ ತಾಲೂಕಿನ ಕಾವೂರಿನಲ್ಲಿ ನಡೆದಿದೆ. ಆರವ್ ಮಹೇಶ್ ಮೃತ ಮಗುವಾಗಿದೆ.
ಸೊಳ್ಳೆಗಳನ್ನು ದೂರ ಇಡಲೆಂದು ಮನೆಗೆ ಸೊಳ್ಳೆನಾಶಕ ಲಿಕ್ವಿಡ್ ತರಲಾಗಿತ್ತು. ಇದನ್ನ ಕುಡಿದ ಮಗು ಅಸ್ವಸ್ಥಗೊಂಡಿತ್ತು.

ಕೂಡಲೇ ಮಗುವನ್ನ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದ್ರೆ ಅಷ್ಟೋತ್ತಿಗಾಗಲೇ ಮಗು ಇಹಲೋಕ ತ್ಯಜಿಸಿತ್ತು.
ಮಣಿಪಾಲ ಆಸ್ಪತ್ರೆಯ ವೈದ್ಯರು ಮಗು ಪ್ರಾಣಬಿಟ್ಟಿರುವುದನ್ನ ದೃಢಪಡಿಸಿದ್ದಾರೆ. ಇತ್ತ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.







