ಜ್ವರದ ತಾಪಮಾನವನ್ನು ತ್ವರಿತವಾಗಿ ತಗ್ಗಿಸಲು ಪರಿಣಾಮಕಾರಿ ಮನೆಮದ್ದು Saakshatv healthtips Fever remedies
ಮಂಗಳೂರು, ಜನವರಿ21: ಜ್ವರವು ಸಾಮಾನ್ಯವಾಗಿ 4-5 ದಿನಗಳವರೆಗೆ ಇರುವುದು ಸಾಮಾನ್ಯ ಲಕ್ಷಣವಾಗಿದೆ. ಒಂದು ವಾರಕ್ಕಿಂತ ಹೆಚ್ಚು ದಿನದ ವರೆಗೆ ವಿಸ್ತರಿಸಿದರೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. Saakshatv healthtips Fever remedies
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿರುವ ಜನರು ಸೂಕ್ಷ್ಮಜೀವಿಗಳ ವಿರುದ್ಧ ಸುಲಭವಾಗಿ ಹೋರಾಡಬಹುದು ಮತ್ತು ಶೀಘ್ರವಾಗಿ ಸಾಮಾನ್ಯ ಸ್ಥಿತಿಗೆ ಬರಬಹುದು. ನಮ್ಮ ದೇಹದಲ್ಲಿನ ಪೋಷಕಾಂಶಗಳ ಮಟ್ಟವನ್ನು ಹೆಚ್ಚಿಸುವ ಮೂಲಕ ಶಕ್ತಿಯುತ ರೋಗನಿರೋಧಕ ಶಕ್ತಿಯನ್ನು ನಿರ್ಮಿಸುವುದು ಅವಶ್ಯಕ. ಜೀವಸತ್ವಗಳು ಮತ್ತು ಖನಿಜಯುಕ್ತ ಆಹಾರಗಳು ನಮ್ಮ ದೇಹವನ್ನು ಹಾನಿಕಾರಕ ರೋಗಕಾರಕಗಳಿಂದ ರಕ್ಷಿಸುತ್ತವೆ.
ಜ್ವರದ ತಾಪಮಾನವನ್ನು ತ್ವರಿತವಾಗಿ ತಗ್ಗಿಸಲು ಕೆಲವು ಮನೆಮದ್ದುಗಳು ಇಲ್ಲಿವೆ.
ಸ್ಪಾಂಜ್ ಬಾತ್ ಮಾಡಿ – ಕೋಲ್ಡ್ ವಾಟರ್ ಸ್ಪಾಂಜ್ ಬಾತ್ ವಿಶೇಷವಾಗಿ ಮಕ್ಕಳಿಗೆ ಜ್ವರದ ತಾಪಮಾನವನ್ನು ತ್ವರಿತವಾಗಿ ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.
ದೇಹದ ಉಷ್ಣತೆಯು ಹೆಚ್ಚಾದಾಗ ನಡುಕ ಪ್ರಾರಂಭವಾಗುತ್ತದೆ. ತಾಪಮಾನವನ್ನು ತಗ್ಗಿಸಲು ದೇಹದ ಎಲ್ಲೆಡೆ ಕೋಲ್ಡ್ ವಾಟರ್ ಸ್ಪಂಜಿಂಗ್ ಮಾಡಿ ಮತ್ತು ಜ್ವರವನ್ನು ಕಡಿಮೆ ಮಾಡಲು ಪ್ಯಾರಸಿಟಮಾಲ್ ತೆಗೆದುಕೊಳ್ಳಿ. ಐಸ್ ಕ್ಯೂಬ್ಗಳಿಂದ ಸುತ್ತಿದ ಅಥವಾ ಕೋಲ್ಡ್ ನೀರಿನಲ್ಲಿ ಅದ್ದಿದ ಮೃದುವಾದ ಬಟ್ಟೆಯನ್ನು ಬಳಸಿ. ಹಣೆಯ ಮೇಲೆ, ಅಂಡರ್ ಆರ್ಮ್ಸ್ ಮತ್ತು ತೊಡೆಯ ಕೀಲುಗಳ ಮೇಲೆ ಬಟ್ಟೆಯನ್ನು ಒತ್ತಿರಿ. ತಾಪಮಾನವು ಗಮನಾರ್ಹವಾಗಿ ಕಡಿಮೆಯಾಗುವವರೆಗೆ ಸುಮಾರು 20-30 ನಿಮಿಷಗಳ ವರೆಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.
ಹಸಿಯಾಗಿ ತಿನ್ನಬಹುದಾದ 6 ಆರೋಗ್ಯಕರ ಆಹಾರಗಳು
ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ – ಶಿಶುಗಳಿಗೆ ತಾಪಮಾನವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಅವರನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸುವುದು. ಅವರ ದೇಹದ ಮೇಲೆ ಉಗುರು ನೀರನ್ನು ಸುರಿಯಿರಿ ಅಥವಾ ಸ್ನಾನದತೊಟ್ಟಿಯಲ್ಲಿ ಇರಿಸಿ. ಇದು ಅವರಿಗೆ ಹಿತಕರವಾಗಿಸುತ್ತದೆ ಮತ್ತು ತಾಪಮಾನವನ್ನು ತಗ್ಗಿಸಲು ಸಹಾಯ ಮಾಡುತ್ತದೆ.
ನುಗ್ಗೆಸೊಪ್ಪು – ನುಗ್ಗೆಸೊಪ್ಪುನಲ್ಲಿ ಪಾಲಿಫಿನಾಲ್ ಇದ್ದು ಅದು ಜ್ವರವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇದು ರೋಗಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಬಲ್ಲದು. ನುಗ್ಗೆಸೊಪ್ಪಿನ ನೀರನ್ನು 2 ವರ್ಷಕ್ಕಿಂತ ಮೇಲ್ಪಟ್ಟ ಶಿಶುಗಳಿಗೆ ನೀಡಬಹುದು. ನುಗ್ಗೆಸೊಪ್ಪಿನ ನೀರು ಸುರಕ್ಷಿತ ಮತ್ತು ಅಂಬೆಗಾಲಿಡುವ ಮಕ್ಕಳಲ್ಲಿ ಜ್ವರಕ್ಕೆ ಉತ್ತಮ ಪರಿಹಾರ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.
ತುಳಸಿ – ತುಳಸಿ ಗಿಡಮೂಲಿಕೆ ಕುಟುಂಬಕ್ಕೆ ಸೇರಿದ್ದು, ಲಘು ಜ್ವರಕ್ಕೆ ಉತ್ತಮವೆಂದು ಪರಿಗಣಿಸಲಾಗಿದೆ. ಗಂಟಲು ನೋವಿಗೆ ಇದು ಒಳ್ಳೆಯದು. ಶೀತ ಮತ್ತು ಕೆಮ್ಮಿಗೆ ತುಳಸಿ ಪರಿಣಾಮಕಾರಿ. ತುಳಸಿ ಅದರ ಆಂಟಿವೈರಲ್ ಗುಣಲಕ್ಷಣಗಳೊಂದಿಗೆ ಸೋಂಕನ್ನು ಸುಲಭವಾಗಿ ತಡೆಯುತ್ತದೆ. ಉತ್ತಮ ಪರಿಹಾರಕ್ಕಾಗಿ ತುಳಸಿ ನೀರನ್ನು ಜೇನುತುಪ್ಪ ಮತ್ತು ಶುಂಠಿಯೊಂದಿಗೆ ಸೇವಿಸಿ.
ಗಿಡಮೂಲಿಕೆಗಳ ರಸಂ – ಜ್ವರವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಅನ್ನದೊಂದಿಗೆ ಸೇರಿಸಿದ ರಸಂ ಅಥವಾ ರಸಂ ಅನ್ನು ಕುಡಿಯುವುದು. ರಸಂ ದಕ್ಷಿಣ ಭಾರತದ ಆಹಾರದಲ್ಲಿ ಕಂಡುಬರುವ ಒಂದು ಘಟಕಾಂಶವಾಗಿದೆ. ಇದನ್ನು ಅರಿಶಿನ, ಶುಂಠಿ, ಬೆಳ್ಳುಳ್ಳಿ ಮತ್ತು ಹುಣಸೆ ತಿರುಳಿನಿಂದ ತಯಾರಿಸಲಾಗುತ್ತದೆ. ಪ್ರತಿಯೊಂದು ಪದಾರ್ಥಗಳು ಅದರ ಪೌಷ್ಠಿಕಾಂಶದ ಮೌಲ್ಯಕ್ಕೆ ಕೊಡುಗೆ ನೀಡುತ್ತವೆ. ಈ ವಸ್ತುಗಳಲ್ಲಿನ ಉತ್ಕರ್ಷಣ ನಿರೋಧಕ ಗುಣವು ಸೂಕ್ಷ್ಮಜೀವಿಗಳನ್ನು ಸುಲಭವಾಗಿ ನಾಶಪಡಿಸುತ್ತದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ವಿಶ್ರಾಂತಿ – ಸಾಕಷ್ಟು ವಿಶ್ರಾಂತಿಯು ಗುಣಪಡಿಸುವ ಪ್ರಕ್ರಿಯೆಯನ್ನು ಹೆಚ್ಚು ವೇಗವಾಗಿ ಮಾಡುತ್ತದೆ. ಅನಾರೋಗ್ಯಕ್ಕೆ ಒಳಗಾದಾಗ ನಿಮ್ಮ ದೇಹವು ವಿಶ್ರಾಂತಿಯನ್ನು ಬಯಸುತ್ತದೆ. ನಿದ್ರೆ ನಿಮ್ಮ ಶಕ್ತಿಯನ್ನು ಉಳಿಸಲು ಮತ್ತು ಸರಿಯಾದ ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ. ಇದು ವೈದ್ಯರ ಸಲಹೆಗೆ ಪರ್ಯಾಯವಲ್ಲ. ಆದ್ದರಿಂದ ವೈದ್ಯಕೀಯ ಸಲಹೆಯನ್ನು ನಿರ್ಲಕ್ಷಿಸಬೇಡಿ.
ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಹಸಿ ಬೆಳ್ಳುಳ್ಳಿಯನ್ನು ಬೆಚ್ಚಗಿನ ನೀರಿನ ಜೊತೆಗೆ ಸೇವಿಸುವುದರ ಆರೋಗ್ಯ ಪ್ರಯೋಜನಗಳು https://t.co/LWUkjMOv18
— Saaksha TV (@SaakshaTv) January 20, 2021
ಡಾರ್ಕ್ ಸರ್ಕಲ್ (ಕಪ್ಪು ವರ್ತಲ) ಅನ್ನು ತೊಡೆದುಹಾಕಲು ಮನೆ ಮದ್ದುಗಳುhttps://t.co/LIJOVLAunp
— Saaksha TV (@SaakshaTv) January 20, 2021