ಬಹುತೇಕ ಉಘ್ರ ಸಂಘಟನೆಗಳ ನಾಯಕತ್ವವನ್ನು ಹೊಂದಿರುವವರು ಪಾಕಿಸ್ತಾನದ ಪ್ರಜೆಗಳು. ಇನ್ನೂ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿಲ್ಲ ಎಂದು ವಿಶ್ವಸಂಸ್ಥೆಯ ವರದಿಯಿಂದ ಬಹಿರಂಗವಾಗಿದೆ. ತಹ್ರಿಕ್ ಏ ತಾಲೀಬಾನ್ ಪಾಕಿಸ್ತಾನ್, ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ದ ಲೆವಂಟ್ – ಖೊರಸಾನ್, ಅಲ್ ಕೈದಾ ಇನ್ ದ ಇಂಡಿಯಾ ಸಬ್ ಕಾಂಟಿನೆಂಟ್ ಸೇರಿ ಅನೇಕ ಉಘ್ರ ಸಂಘಟೆನೆಗಳ ನಾಯಕತ್ವ ಇನ್ನೂ ವರೆಗೂ ಪಾಕ್ ಪ್ರಜೆಗಳೇ ಹೊಂದಿದ್ದ, ಈವರೆಗೂ ನಿಷೇಧಕ್ಕೊಳಗಾಗಿಲ್ಲ ಎಂಬ ಅಂಶ ವಿಶ್ವಸಂಸ್ಥೆ ಬಹಿರಂಗ ಪಡಿಸಿರುವ ವರದಿಯಲ್ಲಿ ಉಲ್ಲೇಖವಾಗಿದೆ.
ಇದು ಐಎಸ್ಐಳಎಲ್ , ಅಲ್ಕೈ ದಾ ಮತ್ತು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು, ಸಂಘಟನೆಗಳ ನಿಗಾ ವಹಿಸುತ್ತಿದ್ದು, ಮಾಹಿತಿ ಕಲೆಹಾಕಿ ವರದಿ ಸಿದ್ಧಪಡಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಆಫ್ಘನ್ ಸ್ಪೆಷಲ್ ಫೋರ್ಸ್ ಅಲ್ಲಿ ದೇಶಾದ್ಯಂತ ಕಾರ್ಯಾಚರಣೆ ನಡೆಸಿ ಐಎಸ್ಐ.ಎಲ್-ಕೆ ಮುಖ್ಯಸ್ಥ ಅಸ್ಲಾಮ್ ಫಾರೂಕಿ, ಜಿಯಾ ಉಲ್ ಹಕ್ ಮತ್ತು ಇತರರನ್ನು ಬಂಧಿಸಿತ್ತು ಎಂಬ ಅಂಶವಿದೆ.
ಅನಲಿಟಿಕಲ್ ಸಪೋರ್ಟ್ ಟೀಮ್ 26ನೇ ವರದಿಯಲ್ಲಿದೆ. ಈ ಫಾರೂಕಿ ಪಾಕಿಸ್ಥಾನದ ಕೈಬರ್ ಪಖ್ತುನ್ಖ್ವಾ ಪ್ರಾಂತ್ಯದವನು. ಕಾಬೂಲ್ನವಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಗುರುದ್ವಾರದ ಮೇಲಿನ ದಾಳಿ ಸಂಚುಕೋರ. ಈ ದಾಳಿಯಲ್ಲಿ 25 ಸಿಖ್ಖರು ಮೃತಪಟ್ಟಿದ್ದರು.ಈತನ ಹೆಸರು ಇನ್ನೂ ಕಪ್ಪು ಪಟ್ಟಿಗೆ ಸೇರ್ಪಡೆಯಾಗಿಲ್ಲ. ಹಕ್ ಹೆಸರು ಕೂಡ ಈ ಪಟ್ಟಿಯಲ್ಲಿಲ್ಲ. ವಿಶ್ವಸಂಸ್ಥೆಯ ಈ ವರದಿ ಕುಖ್ಯಾತ ಉಘ್ರ ಸಂಘಟನೆಗಳ ಜೊತೆಗೆ ಪಾಕ್ ಸರ್ಕಾರ ನಂಟು ಹೊಂದಿದೆ ಎಂಬುದಕ್ಕೆ ಪುರಾವೆಯಾಗಿದೆ.








