3 ಮಕ್ಕಳ ಜೊತೆ ತಾಯಿ ನಾಪತ್ತೆ… ಕಾಡಿನಲ್ಲಿ ಪತ್ತೆ… ಕೊಳೆತ ಸ್ಥಿತಿಯಲ್ಲಿ..!
ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳ ಜೊತೆಗೆ 2 ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಆದ್ರೆ ಇದೀಗ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಗಂಡನ ಜೊತೆ ಜಗಳವಾಡಿ ಮೂರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದ ಮಹಿಳೆ ಮೃತದೇಹ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತ ರಂಜನಾ (30) ಮಕ್ಕಳೊಂದಿಗೆ ನೇಣಿಗೆ ಶರಣಾಗಿರೋದಾಗಿ ಹೇಳಲಾಗ್ತಿದೆ. ಇನ್ನೂ ಆಕೆಯ ಜೊತೆಗೆ ಮಕ್ಕಳಾದ ರೋಹಿತ್ (9), ರೋಷಿಣಿ(6) , ದರ್ಶನ್ (12) ಮೃತದೇಹಗಳು ಸಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಪತಿ ಶ್ರೀಪಥ್ ಗೆ ದೂರದ ಸಂಬಂಧಿ ಜೊತೆಗೆ ಅನೈತಿಕ ಸಂಬಂಧವಿದ್ದ ಹಿನ್ನೆಲೆ ದಂಪತಿಯ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಇನ್ನೂ ಇಷ್ಟಕ್ಕೇ ಸುಮ್ಮನಾಗದ ಶ್ರೀಪತ್ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಸವಿತಾಳನ್ನ ಮದುವೆಯಾಗಿ ಮನೆಗೆ ಕರೆದೊಯ್ದಿದ್ದಾನೆ. ಪತಿಯ ನಡವಳಿಕೆಯಿಂದ ಬೇಸತ್ತುಹೋಗಿದ್ದ ರಂಜನಾ ಕೊನೆಗೆ 2 ತಿಂಗಳ ಹಿಂದೆ ಮೂವರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ಇನ್ನೂ ಪತ್ನಿ ಹಾಗೂ ಮಕ್ಕಳು ನಾಪತ್ತೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಶ್ರೀಪತ್ ದೂರು ದಾಖಲಿಸಿದ್ದ. ಆದ್ರೆ 2 ತಿಂಗಳುಗಳು ಕಳೆದ್ರೂ ಪತ್ನಿ, ಮಕ್ಕಳ ಸುಳಿವು ಸಿಕ್ಕಿರಲಿಲ್ಲ.
ನೀಚ ತಾಯಿ.. ಮಗನನ್ನೇ ಕೊಂದಳು.. ಮಸಾಲೆ ಹಾಕಿ ಬೇಯಿಸಿದಳು..!
ಇದೀಗ ನಾಲ್ವರ ಮೃತದೇಹಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನ್ನ ಗ್ರಾಮಸ್ಥರೊಬ್ಬರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ರು. ಬಳಿಕ ಪೊಲೀಸರು ಈ ಬಗ್ಗೆ ಶ್ರೀಪಥ್ ಗೆ ತಿಳಿಸಿದ್ದಾರೆ.. ಇತ್ತ ಶ್ರೀಪಥ್ ಹಾಗೂ ಸವಿತ ವಿಷಯ ಶವಗಳನ್ನ ಗುರುತಿಸಿದ ಬಳಿಕ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆದ್ರೆ ಸ್ಥಳಕ್ಕೆ ಬಂದ ಪೊಲೀಸರು ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿ, ಇಬ್ಬರ ವಿರುದ್ಧ ಆತ್ಮಹತ್ಯೆಗೆ ಪ್ರೇರೇಪಣೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








