Ramnagar | ಮಕ್ಕಳಿಗೆ ವಿಷವುಣಿಸಿ ಸಾವಿಗೆ ಶರಣಾದ ತಾಯಿ
ರಾಮನಗರದ ಹೊಸಪಾಳ್ಯದಲ್ಲಿ ನಡೆದ ಘಟನೆ
30 ವರ್ಷದ ರೂಪ ಸಾವಿಗೆ ಶರಣಾದ ಮಹಿಳೆ
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ
ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ರಾಮನಗರ : ತಾಯಿ ತನ್ನ ಇಬ್ಬರು ಮಕ್ಕಳಿಗೆ ವಿಷ ನೀಡಿ ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಗಡಿ ತಾಲೂಕಿನ ಹೊಸಪಾಳ್ಯದಲ್ಲಿ ನಡೆದಿದೆ.
30 ವರ್ಷದ ರೂಪ, ಆರು ವರ್ಷದ ಹರ್ಷತಾ, ನಾಲ್ಕು ವರ್ಷದ ಸ್ಪೂರ್ತಿ ಮೃತ ದುರ್ದೈವಿಯಾಗಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.