ಒಂದೇ ಹಗ್ಗಕ್ಕೆ ಪುತ್ರಿಯೊಂದಿಗೆ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.
ಮಹಾದೇವಿ ಇಂಚಲ (34) ಚಾಂದನಿ ಇಂಚಲ (7) ಆತ್ಮಹತ್ಯೆಗೆ ಶರಣಾದವರು. ಈ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಹಾದೇವಿ ಇಂಚಲ ಅವರು ಗೋಕಾಕ್ ತಾಲೂಕಿನ ಖನಗಾಂವ ಗ್ರಾಮದ ಯೋಧನನ್ನು ಮದುವೆಯಾಗಿದ್ದರು.
ಏಳು ವರ್ಷಗಳ ಹಿಂದೆ ಪತಿಯ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಮಹಾದೇವಿ ದಿಂಡಲಕೊಪ್ಪದಲ್ಲಿರುವ ತವರು ಮನೆಯಲ್ಲಿ ಪುತ್ರಿ ಜೊತೆಗೆ ವಾಸವಿದ್ದರು. ಆದರೆ, ಸಹೋದರ ಹಾಗೂ ನಾದಿನಿಯ ಕಿರುಕುಳದಿಂದ ಬೇಸತ್ತು ಪುತ್ರಿಯ ಜೊತೆಗೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಬೆಳಗಾವಿಯ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.