ಅತ್ತೆ ಸೊಸೆ ‘ಹೈಟೆಕ್’ ವಾರ್..! ಫೇಸ್ ಬುಕ್ ನಲ್ಲಿ ಅನ್ ಫ್ರೆಂಡ್ ಮಾಡಿದ ಸೊಸೆಗೆ ಹೀಗಾ ಮಾಡೋದು..!
ಅಮೆರಿಕಾ: ಅತ್ತೆ ಸೊಸೆ ಜಗಳ, ಕಿತ್ತಾಟ ಹೊಡೆದಾ ಇದೆಲ್ಲಾ ಕಾಮನ್. ಆದ್ರೆ ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ಅತ್ತೆ ಸೊಸೆ ನಡುವೆ ಫೇಸ್ ಬುಕ್ ವಿಚಾರವಾಗಿ ಗಲಾಟೆ ನಡೆದುಹೋಗಿದೆ. ಹೌದು ಅಮೆರಿಕಾದಲ್ಲಿ ಇಂತಹದೊಂದು ಘಟನೆ ನಡೆದಿದೆ. ಫೇಸ್ ಬುಕ್ ನಲ್ಲಿ ಫ್ರೆಂಡ್ಸ್ ಆಗಿದ್ದ ಅತ್ತೆ ಸೊಸೆ, ಅದೇ ಫೇಸ್ ಬುಕ್ನಿಂದಾಗಿ ಸಂಬಂಧವನ್ನೇ ಮುರಿದುಕೊಂಡಿದ್ದಾರೆ.
ವಾಟ್ಸಾಪ್ ಕಲರ್ ಅಲ್ಲ.. ನಿಮ್ಮ ಕಲರ್ ಚೇಂಜ್ ಆಗ್ಬಿಡುತ್ತೆ ಹುಷಾರ್..!
40 ವರ್ಷದ ಮಹಿಳೆಗೆ ಆಕೆಯ ಅತ್ತೆ ಮಾವ ಫೇಸ್ ಬುಕ್ನಲ್ಲಿ ಫ್ರೆಂಡ್ ಆಗಿದ್ದರಂತೆ. ಈ ಮಹಿಳೆ ಗಂಡ ಮತ್ತು ಮಗನೊಂದಿಗೆ ದೂರದ ಊರಲ್ಲಿ ಅತ್ತೆ ಮಾವನಿಂದ ದೂರ ವಾಸ ಮಾಡಿದ್ದರಂತೆ. ಮಹಿಳೆ ಆಗಾಗ ಕುಟುಂಬದ ಕೆಲ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದಳಂತೆ. ಮಗನೊಂದಿಗೆ ಮತ್ತು ಗಂಡನೊಂದಿಗೆ ಹಾಕುತ್ತಿದ್ದ ಫೋಟೋಗಳಿಗೆ ಆಕೆಯ ಮಾವ ಒಳ್ಳೆಯ ರೀತಿಯಲ್ಲಿ ಕಾಮೆಂಟ್ ಹಾಕುತ್ತಿದ್ದರಂತೆ. ಆದರೆ ಆಕೆ ಫ್ರೆಂಡ್ಸ್ ಜತೆ ಇರುವ ಫೋಟೋಗಳನ್ನು ಹಾಕಿದರೆ ಬೈಯುವ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದರಂತೆ.
ರಿಲಯನ್ಸ್ ಇಂಡಸ್ಟ್ರೀಸ್ ಗೆ ಕಳೆದ ವರ್ಷಕ್ಕಿಂತ ಶೇ. 12.5 ಹೆಚ್ಚು ಲಾಭ..!
ಕೆಲ ಫೋಟೋಗಳಿಗೆ ನಿನ್ನ ಮಗ ಈ ಫೋಟೋ ನೋಡದಿದ್ದರೆ ಸಾಕು, ಏನು ಕುಡಿದು ಫೋಟೋ ತೆಗೆಸಿಕೊಂಡಿದ್ದೀಯಾ ಎಂದೆಲ್ಲ ಹಾಕಿ ಆಕೆಯ ಮನಸ್ಸಿಗೆ ನೋವುಂಟು ಮಾಡಿದ್ದರಂತೆ. ಇದರಿಂದ ಮಾನಸಿಕವಾಗಿ ನೋವುಂಡ ಮಹಿಳೆ ಅತ್ತೆ ಮಾವನನ್ನು ಫೇಸ್ ಬುಕ್ನಲ್ಲಿ ಅನ್ ಫ್ರೆಂಡ್ ಮಾಡಿದ್ದಾಳೆ. ಹೀಗೆಯೇ ಒಂದು ದಿನ ಆಕೆ ತನ್ನ ಅತ್ತೆಗೆ ಕರೆ ಮಾಡಿದ್ದಾಳೆ. ಆಗ ಅತ್ತೆ ನಮ್ಮನ್ನು ಫೇಸ್ ಬುಕ್ನಲ್ಲಿ ಏಕೆ ಅನ್ ಫ್ರೆಂಡ್ ಮಾಡಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ನನ್ನ ಫೇಸ್ಬುಕ್ ನಲ್ಲಿ ಕೇವಲ ಸ್ನೇಹಿತರನ್ನು ಇಟ್ಟುಕೊಳ್ಳಲು ಬಯಸುತ್ತಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ. ಅದಕ್ಕೆ ಸಿಟ್ಟಾದ ಅತ್ತೆ ಮಾವ ಮಹಿಳೆಯೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ. ಆಕೆ ತಮ್ಮ ಮನೆಗೆ ಬಾರದಂತೆಯೂ ತಡೆದಿದ್ದಾರೆ. ಮಗ ಮತ್ತು ಮೊಮ್ಮಗ ಬಂದರೆ ಸಾಕು ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel