ಮಂಗಳೂರು: ವಿದೇಶದಲ್ಲಿರುವ ಪತ್ನಿಯ ಕೈಬಿಟ್ಟು ಮರು ಮದುವೆಯಾಗಲು ಯತ್ನಿಸಿದ ಅಳಿಯನ ವಿವಾಹವನ್ನು ಅತ್ತೆ ನಿಲ್ಲಿಸಿದ ಘಟನೆ ಮಂಗಳೂರಿನ ತೊಕ್ಕೊಟ್ಟಿನಲ್ಲಿ ನಡೆದಿದೆ. ವೆಲೇರಿಯನ್ ಡಿಸೋಜ ಎಂಬಾತ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಮೊಹಮ್ಮದ್ ಶರೀಫ್ ಅಂತ ಹೆಸರು ಬದಲಾಯಿಸಿಕೊಂಡು ಇಂದು ಮದುವೆಗೆ ತಯಾರಿ ಮಾಡಿಕೊಂಡಿದ್ದನು. ಈ ವಿಚಾರ ತಿಳಿದ ವೆಲೇರಿಯನ್ ಪತ್ನಿ ವಿಲ್ಮಾ, ತನ್ನ ತಾಯಿಗೆ ಮಾಹಿತಿ ನೀಡಿ ಕಣ್ಣೀರಾಕಿದ್ದಾಳೆ. ಕೂಡಲೇ ವಿಲ್ಮಾ ತಾಯಿ ಜೆಸ್ಸಿ ಮಹಿಳಾ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅಲ್ಲದೆ ಪೊಲೀಸರು ಮತ್ತು ಮಹಿಳಾ ಸಂಘಟನೆಗಳನ್ನು ಕರೆದುಕೊಂಡು ಹೋಗಿ ಮದುವೆ ನಿಲ್ಲಿಸಿದ್ದಾರೆ.
ಇನ್ನು ವೆಲೇರಿಯನ್ ಡಿಸೋಜಾಗೆ ನಾಲ್ವರು ಮಕ್ಕಳಿದ್ದು, ದುಬೈನಲ್ಲಿ ಕೆಲಸದಲ್ಲಿದ್ದಾರೆ. ಆದರೆ ವೆಲೇರಿಯನ್ ತನ್ನ ಪತ್ನಿಗೆ ಗೊತ್ತಾಗದಂತೆ ಮತಾಂತರ ಮತ್ತು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದನು. ಸದ್ಯ ಪೊಲೀಸರು ಆತನ ಕೈಯಿಂದ ಮರು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.








