ಮರಿ ಹುಲಿಗಳ ಹುಡುಕಾಟದಲ್ಲಿ ತಾಯಿ ಹುಲಿ tiger saaksha tv
ಚಾಮರಾಜನಗರ : ಎರಡು ಮರಿ ಹುಲಿಗಳನ್ನು ದೂರ ಮಾಡಿಕೊಂಡಿರುವ ತಾಯಿ ಹುಲಿಯು ಮರಿಗಳ ಹುಡುಗಾಟದಲ್ಲಿ ತೊಡಗಿ ಸಂಕಟ ಪಡುತ್ತಿರುವ ಅಪರೂಪದ ದೃಶ್ಯ ಇದೀಗ ಬಂಡೀಪುರ ಸಫಾರಿ ವಲಯದಲ್ಲಿ ಕಂಡು ಬಂದಿದೆ.
ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಚಿತ ಅರಣ್ಯ ಪ್ರದೇಶದಲ್ಲಿ ಸಫಾರಿ ವೇಳೆಯಲ್ಲಿ ತಾಯಿ ಹುಲಿಯು ತನ್ನ ಎರಡು ಮರಿ ಹುಲಿಗಳನ್ನು ದೂರ ಮಾಡಿಕೊಂಡು ಆಕ್ರಂದಿಸುತ್ತಿರುವ ಇದೀಗ ವೈರಲ್ ಆಗಿದೆ.
ಸಾಮಾನ್ಯವಾಗಿ ಬೇಟೆಯಾಡಲು ಕಲಿತ ಹುಲಿ ಮರಿಗಳನ್ನು ತಾಯಿಹುಲಿ ಹೊರಹಾಕುತ್ತೆ, ಆದರೆ ಬಂಡೀಪುರದಲ್ಲಿ ತನ್ನ ಮೂರು ವರ್ಷದ ಎರಡು ಮರಿಗಳ ಹುಡುಗಾಟದಲ್ಲಿ ತೊಡಗಿದೆ. ಸುಂದರಿ ಎಂಬ ತಾಯಿ ಹುಲಿಯ ಈ ಮರಿಗಳನ್ನು ಬಂಡೀಪುರದ ಪ್ರವಾಸಿಗರು ಬ್ರದರ್ಸ್ ಎಂದೇ ಕರೆಯುತ್ತಾರೆ.
ಈ ಹಿಂದೆ ಎರಡು ಮರಿಗಳ ಜೊತೆ ಇದೇ ಹುಲಿ ಓಡಾಡುತ್ತಾ ನೀರಿನಲ್ಲಿ ಆಟವಾಡುವ ದೃಶ್ಯ ವೈರಲ್ ಆಗಿತ್ತು.









