Bollywood : ಸೌತ್ ಇಂಡಿಯನ್ ಸ್ಟೈನ್ ನಲ್ಲಿ ಮದುವೆಯಾದ ಮೌನಿ..!!!
ಕೆಜಿಎಫ್ ನ ಐಟಂ ಹಾಡಿಗೆ ಹಿಂದಿ ವರ್ಷನ್ ಹೆಜ್ಜೆ ಹಾಕಿ ಸುದ್ದಿಯಾಗಿದ್ದ ಮೌನಿ ರಾಯ್ ಈಗ ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಅದ್ಧೂರಿ ಮೆಹಂದಿ ಅರಿಶಿಣ ಶಾಸ್ತ್ರದಲ್ಲಿ ತಮ್ಮ ಭಾವಿ ಪತಿಯ ಜೊತೆಗೆ ಭರ್ಜರಿ ಡ್ಯಾನ್ಸ್ ಮಾಡಿದ್ದ ವಿಡಿಯೋಗಳು ಈ ಹಿಂದೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು..
ಈಗ ಕೇರಳ ಸ್ಟೈಲ್ ಅಂದ್ರೆ ಸೌತ್ ಇಂಡಿಯನ್ ಸ್ಟೈಲ್ ನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಬಿಳಿ ಮತ್ತೆ ಕೆಂಪು ಬಣ್ಣದ ರೇಷ್ಮೆ ಸೀರೆ ಉಟ್ಟು ತುಂಬಾ ಸುಂದರವಾಗಿ ಕಾಣಿಸಿದ್ರೆ , ಅವರ ಕೈ ಹಿಡಿದಿರುವ ದುಬೈ ಮೂಲದ ಉದ್ಯಮಿ ಸೂರಜ್ ನಂಬೂರಿ ಕೂಡ ಗೋಲ್ಡನೀಶ್ ಬಣ್ಣದ ಡುಪಿನಲ್ಲಿ ಅಟ್ರ್ಯಾಕ್ಟೀವ್ ಆಗಿ ಕಾಣಿಸಿಕೊಂಡರು.. ಮದುವೆ ತೀರಾ , ಆಪ್ತ ಗೆಳೆಯರು ಕುಟುಂಬವರು ಭಾಗಿಯಾಗಿದ್ದರು..
ಕಿರುತೆರೆ ಮೂಲಕ ಹಿರಿತೆರೆಗೆ ಕಾಲಿಟ್ಟವರು ಮೌನಿ ರಾಯ್.. ಮೌನಿ ರಾಯ ಅತಿ ಹೆಚ್ಚು ಫೇಮ್ ತಂದುಕೊಟ್ಟಿದ್ದು , ಪೌರಾಣಿಕ ಕಥೆಯಾಧಾರಿತ ಮಹಾದೇಹ ಧಾರಾವಾಹಿಯಲ್ಲಿನ ಸತಿ ಪಾತ್ರ ಮತ್ತೊಂದು ನಾಗಿನ್ ನಲ್ಲಿ ಇಚ್ಛೀದಾರಿ ನಾಗಿಣಿ ಪಾತ್ರ. ದೆರೆಡು ಪಾತ್ರ ಮೌನಿ ಅವರನ್ನ ಫೇಮಸ್ ಮಾಡಿದ್ದವು..
ನಿನ್ನೆಯಿಂದ ಅನೇಕ ಶಾಸ್ತ್ರಗಳು ಅದ್ಧೂರಿಯಾಗಿ ನೆರವೇರಿದ್ದು , ಇಂದು ಮದುವೆ ಬಂಧನಲ್ಲಿ ಇಬ್ಬರೂ ಬಂಧಿಯಾಗಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಈ ಸಂಬಂಧಿತ ಫೋಟೋ ವಿಡಿಯೋಗಳು ವೈರಲ್ ಆಗ್ತಿವೆ..
ಇನ್ನೂ ಮೌನಿ ಮಲಯಾಳಂ ಹಾಗೂ ಬೆಂಗಾಲಿ ಸಂಪ್ರದಾಯದಂತೆ ವಿವಾಹವಾಗುತ್ತಿದ್ದಾರೆ.. ಸೋಶಿಯಲ್ ಮೀಡಿಯಾದಲ್ಲಿ ಈ ನಟಿಗೆ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..









