Mouth ulcers – ಆಗಾಗ್ಗೆ ಬಾಯಿ ಹುಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಈ ಸ್ಟೋರಿ ಓದಿ….
ನಾವು ಒಂದೆಲ್ಲ ಒಂದು ಸಲ ಬಾಯಿ ಹುಣ್ಣಿನ ಸಮಸ್ಸೆಯಿಂದ ಬಳಲುತ್ತಿರುತ್ತೇವೆ. ನಾಲಿಗೆ, ತುಟಿಗಳ ಹಿಂದೆ ಅಥವಾ ದವಡೆಗಳಲ್ಲಿ ಉಂಟಾಗುವ ಹುಣ್ಣುಗಳು ಕೆಲ ದಿನಗಳ ವರೆಗೆ ಶತ್ರುಗಳಂತೆ ಕಾಟ ಕೊಡುತ್ತವೆ. ಆಹಾರ ಅಗಿಯಲು ನುಂಗಲು ಮಾತನಾಡಲೂ ಸಹ ತೊಂದರೆಯುಂಟು ಮಾಡುತ್ತವೆ.
ಸಾಮಾನ್ಯವಾಗಿ ಹೊಟ್ಟೆಯ ಶಾಖದಿಂದಾಗಿ ಅಥವಾ ಉದರವನ್ನ ಸ್ವಚ್ಛಗೊಳಿದೇ ಇದ್ದಾಗ ಬಾಯಿ ಹುಣ್ಣು ಉಂಟಾಗುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ನಿಮಗೆ ಆಗಾಗ್ಗೆ ಬಾಯಿ ಹುಣ್ಣಿನ ಸಮಸ್ಯೆ ಕಾಣಿಸುತ್ತಿದ್ದರೆ ಲಘುವಾಗಿ ಪರಿಗಣಿಸಬೇಡಿ.
ತಜ್ಞರ ಪ್ರಕಾರ, ಹೊಟ್ಟೆಯ ಸಮಸ್ಯೆಗಳನ್ನು ಹೊರತುಪಡಿಸಿ, ಕೆಲವು ಗಂಭೀರ ಪರಿಸ್ಥಿತಿಗಳು ಸಹ ಈ ಹುಣ್ಣುಗಳಿಗೆ ಕಾರಣವಾಗಬಹುದು, ಅದರ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ, ಹುಣ್ಣುಗಳು ಮನೆಮದ್ದು ತೆಗೆದುಕೊಂಡರೆ ಸಾಕು ಗುಣವಾಗಿಬಿಡುತ್ತವೆ. ಅಥವಾ ಒಂದು ಅಥವಾ ಎರಡು ಡೋಸ್ ಔಷಧಿ ತೆಗೆದುಕೊಳ್ಳುವ ಮೂಲಕ ಗುಣವಾಗಿಬಿಡುತ್ತವೆ. ಆದರೆ ನೀವು ಪದೇ ಪದೇ ಇದೇ ಸಮಸ್ಸೆಯನ್ನ ಹೊಂದಿದ್ದರೆ ಖಂಡಿತವಾಗಿಯೂ ಈ ಬಗ್ಗೆ ವೈದ್ಯರನ್ನು ಸಂಪರ್ಕಿಸಿ.
ಬಾಯಿ ಹುಣ್ಣಿನ ಲಕ್ಷಣಗಳು
ಬಾಯಿ ಹುಣ್ಣುಗಳನ್ನು ಸುಲಭವಾಗಿ ಗುರುತಿಸಬಹುದು. ತುಟಿಗಳು, ಒಸಡುಗಳು, ನಾಲಿಗೆ, ಒಳ ಕೆನ್ನೆ ಅಥವಾ ಬಾಯಿಯ ಮೇಲ್ಭಾಗದಲ್ಲಿ ಸಣ್ಣ ಹುಣ್ಣುಗಳಾಗಿ ಕಾಣಿಸಿಕೊಳ್ಳುತ್ತವೆ. ಗುಳ್ಳೆಗಳ ಅಂಚುಗಳ ಸುತ್ತಲೂ ಕೆಂಪು ವಲಯ ಮೂಡುತ್ತದೆ.
ಹುಣ್ಣಿನ ಸುತ್ತ ಸಣ್ಣ ಪ್ರಮಾಣದ ಊತ ಉಂಟಾಗುತ್ತದೆ. ಹಲ್ಲುಜ್ಜುವಾಗ ನೂವು ಹೆಚ್ಚಾಗುತ್ತದೆ, ಮಸಾಲೆಯುಕ್ತ, ಉಪ್ಪು ಅಥವಾ ಹುಳಿ ಆಹಾರವನ್ನು ತಿನ್ನುವಾಗ ತೀಕ್ಷ್ಣವಾದ ನೋವು ಕಾಡುತ್ತದೆ.
ಹುಣ್ಣಿಗೆ ಕಾರಣವೇನು ?
ಬಾಯಿ ಹುಣ್ಣುಗಳಿಗೆ ವಿವಿಧ ಕಾರಣಗಳಿವೆ, ಆಹಾರ ತಿನ್ನುವಾಗ ಆಕಸ್ಮಿಕವಾಗಿ ನಿಮ್ಮ ಕೆನ್ನೆ ಅಥವಾ ನಾಲಿಗೆಯನ್ನು ಕಡಿದುಕೊಳ್ಳುವುದು.
ಬ್ಯಾಕ್ಟೀರಿಯಾ ಅಲರ್ಜಿಯಿಂದ

ವಿಟಮಿನ್-ಬಿ 12 ಕೊರತೆ.
ಸರಿಯಾದ ಟೂತ್ ಬ್ರಷ್ ಬಳಸದಿರುವುದು ಅಥವಾ ಟೂತ್ ಪೇಸ್ಟ್ ನಿಮಗೆ ಹೊಂದಿಕೊಳ್ಳದಿರುವುದು.
ಕಿತ್ತಳೆ, ಅನಾನಸ್ ಮತ್ತು ಸ್ಟ್ರಾಬೆರಿಗಳಂತಹ ಆಮ್ಲೀಯ ಆಹಾರಗಳ ಹೆಚ್ಚಿನ ಸೇವನೆ.
ಋತುಚಕ್ರದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳು.
ಒತ್ತಡ, ನಿದ್ರೆಯ ಕೊರತೆ.
ಬಾಯಿಯ ವೈರಲ್, ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕು ಇವುಗಳಿಂದಾಗಿ ಬಾಯಿಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ.
ನಿಮ್ಮ ಬಾಯಿಯಲ್ಲಿ ಹಾಗಾಗೆ ಹುಣ್ಣುಗಳು ಕಾಣಿಸಿಕೊಳ್ಳುತ್ತಿದ್ದರೆ ಗಂಭೀರವಾದ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು, ಇದಕ್ಕೆ ತ್ವರಿತ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಸೆಲಿಯಾಕ್ ಕಾಯಿಲೆ (ದೇಹವು ಗ್ಲುಟನ್ ಅನ್ನು ತಡೆದುಕೊಳ್ಳಲು ಸಾಧ್ಯವಾಗದ ಸ್ಥಿತಿ).
ಉರಿಯೂತದ ಕರುಳಿನ ಕಾಯಿಲೆಯ ಸಮಸ್ಯೆ.
ಮಧುಮೇಹ
ಪ್ರತಿರಕ್ಷಣಾ ವ್ಯವಸ್ಥೆಯ ದೌರ್ಬಲ್ಯ, ಈ ಕಾರಣದಿಂದಾಗಿ ವೈರಸ್ಗಳು ಮತ್ತು ಬ್ಯಾಕ್ಟೀರಿಯಾಗಳು ಬಾಯಿಯ ಕೋಶಗಳ ಮೇಲೆ ದಾಳಿ ಮಾಡುತ್ತವೆ.
ವಿಟಮಿನ್ ಬಿ-12 ಕೊರತೆ
ನೀವು ಆಗಾಗ್ಗೆ ಹುಣ್ಣುಗಳನ್ನ ಹೊಂದಿದ್ದರೆ, ಅದು ವಿಟಮಿನ್ ಬಿ 12 ಕೊರತೆಯ ಸಂಕೇತವಾಗಿದೆ. ನಿಮ್ಮ ನರಮಂಡಲವನ್ನು ಆರೋಗ್ಯಕರವಾಗಿಡಲು ಮತ್ತು ಕೆಂಪು ರಕ್ತ ಕಣಗಳ ಉತ್ಪತ್ತಿ, ಮತ್ತು ಆಹಾರದಿಂದ ಶಕ್ತಿಯನ್ನು ಪಡೆಯಲು ಈ ವಿಟಮಿನ್ ಅಗತ್ಯವಿದೆ. ಇದರ ಕೊರತೆ ಇರುವವರಿಗೆ ಆಗಾಗ್ಗೆ ಗುಳ್ಳೆಗಳು ಬರಬಹುದು. ಪುನರಾವರ್ತಿತ ಹುಣ್ಣಿನ ಸಮಸ್ಯೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ








