ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವಂತೆ ನಿನ್ನೆ ಬೆಂಗಳೂರಿನಲ್ಲಿ ನಡೆಯಿತು ಒಂದು ವಿಶೇಷ—But Non-Political ಭೇಟಿ. ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಹಾಗೂ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ನಿನ್ನೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಸಂಪೂರ್ಣ ರಾಜಕೀಯದಿಂದ ದೂರವಿರುವ ಈ ಭೇಟಿಗೆ ಸಂಬಂಧಿಸಿ ಮಾತನಾಡಿದ ರಾಘವೇಂದ್ರ, “ಇದು ಸಂಪೂರ್ಣ ವೈಯಕ್ತಿಕ ಭೇಟಿ. ನನ್ನ ಮಗನ ಮದುವೆಗೆ ಆಹ್ವಾನ ನೀಡಲು ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೇನೆ. ಅವರ ಸ್ಥಾನಮಾನಕ್ಕನುಗುಣವಾಗಿ ಆಮಂತ್ರಣ ನೀಡುವುದು ನನ್ನ ಕರ್ತವ್ಯ” ಎಂದು ತಿಳಿಸಿದ್ದಾರೆ.
ಅವರ ಪ್ರಕಾರ, ಈ ಭೇಟಿಗೆ ಯಾವುದೇ ರಾಜಕೀಯ ಉದ್ದೇಶವಿಲ್ಲ. “ಮದುವೆ ವಿಷಯವಾಗಿ ಐದು ನಿಮಿಷ ಮಾತುಕತೆ ನಡೀತು. ನಂತರ ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೆಲವೊಂದು ಮಾತುಕತೆ ನಡೆದದ್ದು ಮಾತ್ರವಷ್ಟೇ. ಬೇರೆ ಯಾವುದೇ ಗಂಭೀರ ವಿಚಾರ ಇಲ್ಲ,” ಎಂದಿದ್ದಾರೆ.
‘ವಿವಾದ ಮಾಡಬೇಡಿ’ ಎಂಬ ಮನವಿ
ಈ ವೇಳೆ ಮಾಧ್ಯಮದವರು ಈ ಭೇಟಿಯ ಬಗ್ಗೆ ರಾಜಕೀಯ ಪ್ರಶ್ನೆ ಹಾಕುತ್ತಿದ್ದಂತೆ ರಾಘವೇಂದ್ರ ಸ್ಪಷ್ಟನೆ ನೀಡಿದರು: “ಇದು ರಾಜಕೀಯ ಮಾತುಕತೆ ಅಲ್ಲ. ದಯವಿಟ್ಟು ಈ ಬಗ್ಗೆ ವಿವಾದ ಬೇಡ. ಇದೊಂದು ಸಾಮಾನ್ಯ,ಭೇಟಿ ಅಷ್ಟೇ
ವಿವಾಹ ಕಾರ್ಯಕ್ರಮಕ್ಕೆ ಎಲ್ಲ ಪಕ್ಷಗಳ ನಾಯಕರಿಗೆ ಆಹ್ವಾನ
ರಾಘವೇಂದ್ರ ಹೇಳುವಂತೆ, ಅವರು ಮದುವೆ ಕಾರ್ಯಕ್ರಮಕ್ಕೆ ಎಲ್ಲಾ ಪ್ರಮುಖ ನಾಯಕರಿಗೆ ಎಲ್ಲಾ ಪಕ್ಷಗಳ ಪ್ರತಿಷ್ಠಿತ ನಾಯಕರಿಗೆ ಆಹ್ವಾನ ನೀಡಲು ಯೋಜನೆ ಮಾಡಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಕೂಡ ಮದುವೆಗೆ ಬರುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.








