ಪತ್ನಿಗಾಗಿ ತಾಜ್ ಮಹಲ್ ರೀತಿಯ ಮನೆ ನಿರ್ಮಿಸಿದ ಪತಿ Taj Mahal saaksha tv
ಮಧ್ಯಪ್ರದೇಶ : ಪತ್ನಿಗಾಗಿ ಪತಿಯೊಬ್ಬರು ತಾಜ್ ಮಹಲ್ ಹೋಲುವ ಮನೆ ನಿರ್ಮಿಸಿಕೊಟ್ಟಿರುವ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಬುರ್ಹಾನ್ ಪುರದ ನಿವಾಸಿ ಆನಂದ್ ಚೋಕ್ಸಿ ಎಂಬುವವರು ತಮ್ಮ ಪತ್ನಿಗಾಗಿ ತಾಜ್ ಮಹಲ್ ಮಾದರಿ ಮನೆ ನಿರ್ಮಿಸಿಕೊಟ್ಟಿದ್ದಾರೆ.
ಈ ಮನೆ ನಿರ್ಮಾಣಕ್ಕೆ ಬರೋಬ್ಬರಿ ಮೂರು ವರ್ಷ ತೆಗೆದುಕೊಳ್ಳಲಾಗಿದೆ. ಬಂಗಾಳ ಮತ್ತು ಇಂದೋರ್ ನ ಕಲಾವಿದರು ಈ ಮನೆ ನಿರ್ಮಾಣದಲ್ಲಿ ಕೆಲಸ ಮಾಡಿದ್ದಾರೆ.
ಇನ್ನು ಈ ಮನೆಯ ಗುಮ್ಮಟ 29 ಅಡಿ ಎತ್ತರದಲ್ಲಿದೆ. ಇದು ತಾಜ್ ಮಹಲ್ ತರಹದ ಗೋಪುರಗಳನ್ನು ಹೊಂದಿದೆ.
ಮನೆಯ ನೆಲಹಾಸನ್ನು ರಾಜಸ್ಥಾನದ ಮಕ್ರಾನಾದಿಂದ ಮಾಡಲಾಗಿದೆ.
ಈ ಮನೆಯ ಪೀಠೋಪಕರಣಗಳನ್ನು ಮುಂಬೈನ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ.
ಮನೆಯೊಳಗೆ ವಿಶಾಲವಾದ ಹಾಲ್ ಇದ್ದು, ಕೆಳಗೆ 2 ಬೆಡ್ರೂಮ್, ಮೇಲೆ ಎರಡು ಬೆಡ್ ರೂಂಗಳಿವೆ.
ಅಲ್ಲದೇ ಮನೆಯ ಮೇಲಂತಸ್ತಿನಲ್ಲಿ ಗ್ರಂಥಾಲಯ ಹಾಗೂ ಧ್ಯಾನದ ಕೊಠಡಿ ಕೂಡ ಇದೆ..