ಹೆಚ್.ವಿಶ್ವನಾಥ್ ಬಗ್ಗೆ ಮಾತನಾಡಿದ್ರೇ.. ನನ್ನ ಬಾಯೇ ಹೊಲಸಾಗುತ್ತದೆ : ರೇಣುಕಾಚಾರ್ಯ
ದಾವಣಗೆರೆ : ಎಂ ಎಲ್ ಸಿ ಹೆಚ್.ವಿಶ್ವನಾಥ್ ಬಗ್ಗೆ ಮಾತನಾಡಿದ್ರೇ.. ನನ್ನ ಬಾಯೇ ಹೊಲಸಾಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ಹೊರಹಾಕಿದ್ದಾರೆ.
ಹೆಚ್. ವಿಶ್ವನಾಥ್ ಇಂದು ಸುದ್ದಿಗೋಷ್ಠಿ ನಡೆಸಿ ಕಿಕ್ ಬ್ಯಾಕ್ ಆರೋಪ ಮಾಡಿದರು. ಇದಕ್ಕೆ ಹೊನ್ನಾಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಎಂ.ಪಿ.ರೇಣುಕಾಚಾರ್ಯ, ನೀರಾವರಿ ಇಲಾಖೆಯಲ್ಲಿನ 20 ಸಾವಿರ ಕೋಟಿ ರೂ ಕಿಕ್ ಬ್ಯಾಕ್ ಆರೋಪ ಸತ್ಯಕ್ಕೆ ದೂರವಾದದ್ದು.
ಎಂ ಎಲ್ ಸಿ ಹೆಚ್.ವಿಶ್ವನಾಥ್ ಬಗ್ಗೆ ಮಾತನಾಡಿದ್ರೇ.. ನನ್ನ ಬಾಯೇ ಹೊಲಸಾಗುತ್ತದೆ. ಅವರು ಯಾರ ಬಗ್ಗೆ ಮಾತನಾಡಿಲ್ಲ.
ಎಲ್ಲರ ಬಗ್ಗೆಯೂ ಮಾತನಾಡಿದ್ದಾರೆ. ವಿಶ್ವನಾಥ್ ಮಾಡಿರುವಂತ ಆರೋಪ ಸತ್ಯಕ್ಕೆ ದೂರವಾಗಿದ್ದು ಎಂದು ಸ್ಪಷ್ಟಪಿಸಿದ್ದಾರೆ.
ಅಲ್ಲದೆ ನೀರಾವರಿ ಇಲಾಖೆಯ ಟೆಂಡರ್ ಪಾರದರ್ಶಕವಾದಂತದ್ದಾಗಿದೆ. ಇಲಾಖೆಯ ವೆಬ್ ಸೈಟ್ ನಲ್ಲಿ ನೋಡಿದ್ರೇ.. ಎಲ್ಲವೂ ಪಾರದರ್ಶಕವಾಗಿ ತಿಳಿಯಲಿದೆ.
ಟೆಂಡರ್ ನೀಡಿಕೆಯಲ್ಲಿ ಯಾವುದೇ ಕಿಕ್ ಬ್ಯಾಕ್ ಆಗಲಿ, ಹಗರಣ ಆಗಲಿ ಆಗಿಲ್ಲ. ಅವರ ಆಡಿಯೋ-ವೀಡಿಯೋ ನಿಮಗೆ ಸಿಕ್ಕಿರಬಹುದು.
ಆ ಆಡಿಯೋ ವೀಡಿಯೋ ಎಷ್ಟು ಅಸಂಬದ್ಧವಾಗಿದೆ ತಾವೆಲ್ಲಾ ಕೇಳಿರಬಹುದು. ಎಷ್ಟು ನಾಲಿಗೆ ಸಂಸ್ಕøತಿ ಇದೆ ಎಂಬುದಾಗಿ ಗೊತ್ತಾಗಲಿದೆ.
ವಿಶ್ವನಾಥ್ ಎಲ್ಲರ ಬಗ್ಗೆಯೂ ಮಾತನಾಡಿದ್ದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಸಮಾಧಾನದಲ್ಲಿ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ಹಳ್ಳಿಹಕ್ಕಿ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದ್ದಾರೆ.