ಮಂತ್ರಿಪಟ್ಟ ಮಿಸ್ : ನಾನು ಅಸಮರ್ಥ ಎಂದು ರೇಣುಕಾಚಾರ್ಯ ಕಣ್ಣೀರು
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಂಪುಟ ಸರ್ಕಸ್ ಆರಂಭವಾಗಿದ್ದು, ಇಂದು ಮೂರು ಗಂಟೆಗೆ ರಾಜಭವನದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆಯಲಿದೆ. ಹೊಸದಾಗಿ 7 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ವಲಸಿಗರ ಕೋಟಾದಲ್ಲಿ ಎಂಟಿಬಿ ನಾಗರಾಜ್, ಆರ್.ಶಂಕರ್, ಮುನಿರತ್ನ ಹಾಗೂ ಮೂಲ ಬಿಜೆಪಿಗರ ಕೋಟಾದಲ್ಲಿ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಎಸ್.ಅಂಗಾರ, ಸಿ.ಪಿ.ಯೋಗೇಶ್ವರ್, ಮುರುಗೇಶ್ ನಿರಾಣಿ ಹೆಸರಿದೆ.
ಈ ಮಧ್ಯೆ ಸಚಿವಸ್ಥಾನ ತಪ್ಪಿದ ಕಾರಣ ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳ್ಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಮಾಧ್ಯಮದ ಎದುರು ಕಣ್ಣೀರು ಹಾಕಿದ್ದಾರೆ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಸಿಎಂ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ಕ್ಷೇತ್ರದ ಕೆಲಸ ಮಾಡಿದ್ದೇನೆ. ನಾನು ನೇರ ಹಾಗೂ ನಿಷ್ಠುರವಾಗಿ ಮಾತನಾಡುತ್ತೇನೆ.
ಅದೇ ನನಗೆ ಇಂದು ಮುಳುವಾಗಿದೆ ಅನಿಸುತ್ತಿದೆ.ನಾನು ಲಾಬಿ ಮಾಡಬಹುದಾಗಿತ್ತು. ಆದ್ರೆ ಎಂದು ನಾನು ಆ ರೀತಿ ಮಾಡಿಲ್ಲ.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಕ್ಷೇತ್ರದ ಕೆಲಸ ಮಾಡಿದವರು ಮನೆಯಲ್ಲಿದ್ದಾರೆ. ಲಾಬಿ ಮಾಡಿದವರು ಸಚಿವರಾಗುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.
ಬೇಸರ ಆಗಿದ್ದು, ಯಾರ ಮುಂದೆ ಹೇಳಿಕೊಳ್ಳಲಿ. ಕ್ಷೇತ್ರದ ಜನತೆಗೆ ಸಿಎಂ ನಿರ್ಧಾರ ಬೇಸರ ತರಿಸಿದೆ. ಸಚಿವರಾಗಲು ಅರ್ಹತೆ ಬೇಕು, ನಾನು ಅಸರ್ಮರ್ಥನಿರಹುದು, ಹಾಗಾಗಿ ಮಾಡಿರಲಿಕ್ಕಿಲ್ಲ.
ನಾನು ಮಂತ್ರಿಯಾಗಿಲ್ಲ ನಾನು ಅಸಮರ್ಥ ಎಂದು ಅಸಮಾಧಾನ ಹೊರಹಾಕಿದರು.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಸರ್ಕಾರ ಅಂದ್ರೇ ಬೆಳಗಾವಿ, ಬೆಂಗಳೂರು ಮಾತ್ರವಲ್ಲ, ಯಾವುದೇ ಸಭೆ ಮಾಡಲ್ಲ. ಮುಖ್ಯಮಂತ್ರಿಯನ್ನು ಭೇಟಿಯಾಗಲ್ಲ.
ಮಂತ್ರಿಗಿರಿಗೆ ಅಪ್ಲಿಕೇಷನ್ ಹಾಕಲ್ಲ. ಸಂದರ್ಭ ಬಂದಾಗ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









