ಕಾಂಗ್ರೆಸ್ ಪಕ್ಷ ಸೈತನಾರನ್ನೇ ಪೋಷಿಸಿಕೊಂಡು ಬಂದಿದೆ : ಎಂಪಿ ರೇಣುಕಾಚಾರ್ಯ
ಬೆಂಗಳೂರು: ಕಾಮಾಲೆ ಕಣ್ಣಿಗೆ ಕಾಣುವುದೆಲ್ಲವೂ ಹಳದಿ ಎಂಬಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಆಲ್ ಖೈದಾ ಉಗ್ರಗಾಮಿ ಸಂಘಟನೆ ಹಾಗೂ ಮುಖ್ಯಸ್ಥ ಆಯ್ಯನ್ ಜವಾಹಾರಿ ಮುಂದೊಂದು ದಿನ ವೀರ ಸ್ವತಂತ್ರ ಹೋರಾಟಗಾರರಾಗಿ ಕಂಡರೂ ಅಚ್ಚರಿಯಿಲ್ಲ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಅವರು ವ್ಯಂಗ್ಯವಾಡಿದ್ದಾರೆ
ಈ ಕುರಿತು ಸರಣಿ ಟ್ವೀಟ್ ಮಾಡಿದ ಅವರು ಏಕೆಂದರೆ ಕಾಂಗ್ರೆಸ್ ಪಕ್ಷ ಇಂತಹ ಸೈತನಾರನ್ನೇ ಪೋಷಿಸಿಕೊಂಡು ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ.! ನಿಮ್ಮ ಹೇಳಿಕೆಯಲ್ಲಿ ನಮಗೆ ಹೊಸದೇನು ಕಾಣುತ್ತಿಲ್ಲ. ಅತಿಯಾದ ಓಲೈಕೆಯ ಪರಿಣಾಮ 2018 ರ ಚುನಾವಣೆಯಲ್ಲಿ ನಿಮ್ಮ ಪಕ್ಷದ ಸ್ಥಿತಿ ಏನಾಯಿತು ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಿ ಎಂದು ಕಾಲೆಳೆದಿದ್ದಾರೆ.
ಅಲ್ಲದೇ ಇದು ಆರ್ ಎಸ್ ಎಸ್ ಸೃಷ್ಟಿ ಎನ್ನುವ ನಿಮಗೆ ಆತ್ಮಸಾಕ್ಷಿ ಎಂಬುದಿದ್ದರೆ. ಅಲ್ಖೈದಾದ ಮುಖವಾಣಿ ಅಸ್-ಸಾಹಬ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಅಮನ್-ಅಲ್-ಜವಾಹಿರಿಯ ಮಾತನಾಡಿರುವ ವಿಡಿಯೋ ಒಂದು ಬಾರಿ ನೋಡಿ ನಂತರ ಸಂಘಪರಿವಾರದ ಬಗ್ಗೆ ಮಾತನಾಡಿ ಎಂದು ಕಿಡಿಕಾರಿದ್ದಾರೆ.
ಇನ್ನೂ ಅಲ್ಪಸಂಖ್ಯಾತರ ಓಲೈಕೆಗಾಗಿ ಇನ್ನು ಎಷ್ಟು ದಿನ ಇಂತಹ ಹಸಿ-ಬಿಸಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತೀರಿ? ನೀವು ಹೇಳಿದ್ದನ್ನೆಲ್ಲಾ ಒಪ್ಪಲು ಕರ್ನಾಟಕದ ಜನ ಕಿವಿಮೇಲೆ ಲಾಲ್ ಭಾಗ್ ಹೂವು ಇಟ್ಟುಕೊಂಡಿದ್ದಾರೆ ಎಂದು ಭಾವಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ
ಎಷ್ಟೇ ಆಗಲಿ ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿ ಬಂದವರು ನೀವು. 2018 ರ ಚುನಾವಣೆಯಲ್ಲಿ ಆದ ಗತಿಯೇ 2023 ರ ಚುನಾವಣೆ ಯಲ್ಲಿ ಆಗುತ್ತದೆ. ನಿಮ್ಮ ತುಷ್ಟೀಕರಣಕ್ಕೆ ಜನತೆ ತಕ್ಕ ಪಾಠ ಕಲಿಸುವುದರಲ್ಲಿ ಸಂದೇಹವೇ ಬೇಡ. ಕಾದು ನೋಡಿ ಎಂದರು.