ಕೋವಿಡ್ ನಿಯಮ ಗಾಳಿಗೆ ತೂರಿ ಪ್ರತಿಭಟಿಸಿದ ಶೋಭಾ ಕರಂದ್ಲಾಜೆ – ಪ್ರಕರಣ ದಾಖಲಿಸುವಂತೆ ಕಾಂಗ್ರೆಸ್ ಒತ್ತಾಯ
ಉಡುಪಿ : ಇಡೀ ದೇಶದಲ್ಲಿ ಕೊರೊನಾ 2ನೇ ಅಲೆಯಲ್ಲಿ ಜನರು ಸಾಯುತ್ತಿದ್ದಾರೆ.. ದಿನೇ ದಿನೇ ಸೋಂಕಿತ ಪ್ರಕರಣಗಳು ಹೆಚ್ಚಾಗ್ತಲೇ ಇವೆ. ಸರ್ಕಾರ ನಾಮಕಾವಸ್ಥೆ ಲಾಕ್ ಡೌನ್ ಜಾರಿ ಮಾಡಿದೆಯೇನೋ ಅನ್ನುವಂತೆ ವರ್ತಿಸುತ್ತಿದೆ. ಒಂದೆಡೆ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.. ಗುಂಪು ಗುಂಪಾಗಿ ಸೇರಬಾರದು.. ಮಾಸ್ಕ್ ಧರಿಸಲೇಬೇಕಂತ ನಿಯಮಗಳನ್ನ ಸರ್ಕಾರ ಜಾರಿ ಮಾಡಿದೆ. ಆದ್ರೆ ಈ ನಿಯಮಗಳನ್ನ ಖುದ್ದು ಬಿಜೆಪಿಯೇ ಮುರಿದಿದ್ದು, ವಿಪಕ್ಷ ನಾಯಕಟರ ಟೀಕೆಗೂ ಗುರಿಯಾಗಿದೆ.
ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಗೆ ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಉಡುಪಿ ಬಿಜೆಪಿ ಕಚೇರಿ ಮುಂಭಾಗ ಪಶ್ಚಿಮ ಬಂಗಾಳದಲ್ಲಿ ಮತೀಯ ಗಲಭೆಗೆ ವಿರುದ್ಧ ಪ್ರತಿಭಟನೆ ನಡೆಸಿದ್ರು. ಒಂದು ಕೋಮಿನ ಜನ ಕೊಲೆ, ಗೂಂಡಾಗಿರಿಯಲ್ಲಿ ತೊಡಗಿದ್ದಾರೆ. ಬಿಜೆಪಿ ಕಚೇರಿ, ಎಬಿವಿಪಿ ಕಚೇರಿಗೆ ಬೆಂಕಿ ಹಚ್ಚುತ್ತಿದ್ದಾರೆ. ಇಂತಹ ಗೂಂಡಾಗಿರಿ ದೇಶ ಹಿಂದೆಂದೂ ಕಂಡಿಲ್ಲ ಅಂತ ಮಮತಾ ಬ್ಯಾನರ್ಜಿ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಉಡುಪಿಯ ಕಡಿಯಾಳಿ ಬಿಜೆಪಿ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಶೋಭಾ ಕರಂದ್ಲಾಜೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ ಸೇರಿದಂತೆ ಸುಮಾರು ಹದಿನೈದು ಜನ ಬಿಜೆಪಿಯ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರದ ಮಾರ್ಗಸೂಚಿಯನ್ನು ಶೋಭಾ ಕರಂದ್ಲಾಜೆಯವರೇ ಉಲ್ಲಂಘನೆ ಮಾಡಿದ್ದಾರೆ. ಡಿಸಿಯವರು ಶೋಭಾ ಕರಂದ್ಲಾಜೆ ವಿರುದ್ಧ ಕೇಸು ದಾಖಲಿಸಬೇಕು ಎಂದು ಉಡುಪಿ ಕಾಂಗ್ರೆಸ್ ಒತ್ತಾಯಿಸಿದೆ.








