ಜಿ.ಮಾದೇಗೌಡರ ನಿಧನಕ್ಕೆ ಸಂಸದೆ ಸುಮಲತಾ ಕಂಬನಿ
ಮಂಡ್ಯ : ಹಿರಿಯ ಮುತ್ಸದ್ಧಿ, ನಮ್ಮ ಜಿಲ್ಲೆಯೆ ಕಾವೇರಿ ಹೋರಾಟಗಾರರು. ನಮಗೆ ತಂದೆ ಸಮಾನರಾದ ಜಿ.ಮಾದೇಗೌಡರ ಸಾವು ತುಂಬಲಾರದ ನಷ್ಟ ಎಂದು ಸಂಸದೆ ಸುಮಲತಾ ಸಂತಾಪ ಸೂಚಿಸಿದ್ದಾರೆ.
ಮಾದೇಗೌಡರ ನಿಧನದ ಹಿನ್ನೆಲೆಯಲ್ಲಿ ಇಂದು ಸಂಸದೆ ಸುಮಲತಾ ಅವರು ಜಿ.ಮಾದೇಗೌಡರ ಅಂತಿಮ ದರ್ಶನ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಮುತ್ಸದ್ಧಿ, ನಮ್ಮ ಜಿಲ್ಲೆಯೆ ಕಾವೇರಿ ಹೋರಾಟಗಾರರು.
ನಮಗೆ ತಂದೆ ಸಮಾನರಾದ ಜಿ.ಮಾದೇಗೌಡರ ಸಾವು ತುಂಬಲಾರದ ನಷ್ಟ. ಪ್ರಮಾಣಿಕ ಧ್ಯೇಯ ಗುರಿ ಇಟ್ಟುಕೊಂಡು ಹೋರಾಟ ಮಾಡಿದ್ರು.
ನನಗೆ ಅವರು ಪರಿಚಯ ಆಗಿದ್ದು 25 ವರ್ಷದ ಹಿಂದೆ, ನಾನು ಮದುವೆ ಆದ ಸಂದರ್ಭದಲ್ಲಿ ಅಂಬರೀಶ್ ಪರಿಚಯ ಮಾಡಿಸಿದ್ರು. ನನಗೆ ತಂದೆ ಇಲ್ಲ ನನಗೆ ತಂದೆ ಸಮಾನರು ಮಾದೇಗೌಡ್ರು ಎಂದು ಹೇಳಿದ್ರು.
ಅಷ್ಟೂ ಆತ್ಮೀಯ ಗೌರವ ಅವರ ಮೇಲಿತ್ತು. ಮಂಡ್ಯಗೆ ಬಂದಾಗ ನನ್ನ ಮನೆಗೆ ಬರಬೇಕು. ನೀನೂ ನಮ್ಮಸೊಸೇ ಅಂತ ಹೇಳ್ತಿದ್ರು. ರಾಜಕೀಯವಾಗಿ ಅವರ ಪಕ್ಷಕ್ಕೆ ನಾನೂ ಬರಬೇಕು ಅಂತ ಆಶಯ ವ್ಯಕ್ತಪಡಿಸಿದ್ರು. ಅದನ್ನ ಮೀರಿ ಅವರು ನನಗೆ ತಂದೆ ಸಮಾನರಾಗಿದ್ರು ಎಂದು ಮಂಡ್ಯದ ಮಾದೇಗೌಡರ ನಿವಾಸದ ಬಳಿ ಸಂಸದೆ ಸುಮಲತಾ ಕಂಬನಿ ಮಿಡಿದರು.










