ಇದು ಹೆಚ್ ಡಿಕೆ ಸಂಸ್ಕೃತಿ ತೋರುತ್ತದೆ – ಸಂಸದೆ ಸುಮಲತಾ ಕಿಡಿ
ಬೆಂಗಳೂರು: ಕೆಆರ್ ಎಸ್ ಬಿರುಕು ಬಿಟ್ಟರೆ ಸಂಸದೆ ಸುಮಲತಾ ಅವರನ್ನೇ ಅಡ್ಡ ಮಲಗಿಸಬೇಕು ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ಹೇಳಿಕೆಗೆ ಮಮಡ್ಯ ಸಂಸದೆ ಸುಮಲತಾ ಅವರು ತಿರುಗೇಟು ನೀಡಿದ್ದಾರೆ..
ಓರ್ವ ಮಾಜಿ ಸಿಎಂ ಆಗಿ, ಈ ರಾಜ್ಯದ ಜನಪ್ರಿಯ ರಾಜಕಾರಣಿಯಾಗಿ ಇಂತಹ ಮಾತುಗಳನ್ನು ಆಡುವುದು ಶೋಭೆತರಲ್ಲ. ಹೆಣ್ಣುಮಕ್ಕಳ ಬಗ್ಗೆ ಕೀಳುಮಟ್ಟದ ಹೇಳಿಕೆ ಕುಮಾರಸ್ವಾಮಿ ಸಂಸ್ಕೃತಿ, ವ್ಯಕ್ತಿತ್ವನ್ನು ತೋರುತ್ತದೆ ಎಂದು ಸುಮಲತಾ ಅವರು ಆಕ್ರೋಶ ಹೊರಹಾಕಿದ್ದಾರೆ.
ಮತ್ತೆ ಲಾಕ್ ಡೌನ್ ಎಚ್ಚರಿಕೆ ನೀಡಿದ ಸಚಿವ ಆರ್ ಅಶೋಕ್
ಅಲ್ಲದೇ ಕೆ ಆರ್ ಎಸ್ ಜಲಾಶಯ ರಕ್ಷಣೆ ನನ್ನ ಉದ್ದೇಶ. ನನಗೆ ಬಂದ ಮಾಹಿತಿ ಪ್ರಕಾರ ಜಲಾಶಯ ಉಳಿವಿಗಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ. ಈ ಬಗ್ಗೆ ಕುಮಾರಸ್ವಾಮಿಯವರ ಮಾತು ಕೇಳಿ ಕೆಲಸ ಮಾಡಬೇಕಿಲ್ಲ. ಜನರ ಹಿತ ಕಾಯುವುದು ನನ್ನ ಜವಾಬ್ದಾರಿ ಎಂದು ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.
ಅಲ್ಲದೇ ಕುಮಾರಸ್ವಾಮಿ ಹೇಳಿದಂತೆ ಮಂಡ್ಯ ಜಿಲ್ಲೆ ನನ್ನಂತ ಸಂಸದೆ ಹಿಂದೆ ನೋಡಿಲ್ಲ. ಕಾರಣ ನನ್ನಂತ ನೇರವಂತಿಕೆ ಹಾಗೂ ಭ್ರಷ್ಟಾಚಾರದ ಬಗ್ಗೆ ನೇರವಾಗಿ ಧ್ವನಿ ಎತ್ತಿರುವುದರಿಂದ ಅವರಿಗೆ ಜೀರ್ಣಿಸಿಕೊಳ್ಳುವುದು ಕಷ್ಟವಾಗಿದೆ. ನನ್ನ ಕೆಲಸ, ಜವಾಬ್ದಾರಿ ನಾನು ಮಾಡುತ್ತೇನೆ. ಇವರನ್ನು ಕೇಳಿ ಮಾಡಬೇಕಿಲ್ಲ. ಚುನಾವಣೆ ಸಂದರ್ಭದಿಂದಲೂ ಅವರ ಸಂಸ್ಕೃತಿ-ಸಂಸ್ಕಾರ ಏನೆಂಬುದು ಜನರಿಗೂ ಗೊತ್ತಾಗಿದೆ.
ಎರಡು ಬಾರಿ ಸಿಎಂ ಆದವರು, ಗೌರವಾನ್ವಿತ ಸ್ಥಾನದಲ್ಲಿರುವ ಹಿರಿಯರು ಹೆಣ್ಣುಮಕ್ಕಳ ಬಗ್ಗೆ ಈ ರೀತಿ ಮಾತನಾಡುವುದು ಸರಿಯೇ. ಹೆಣ್ಣುಮಕ್ಕಳ ಬಗ್ಗೆ ಅವರಿಗಿರುವ ಗೌರವ ಗೊತ್ತಾಗುತ್ತಿದೆ. ವೈಯಕ್ತಿಕವಾಗಿ ಇಂತಹ ಮಾತು ಹೇಳಿರುವುದು ಸರಿಯಲ್ಲ. ಇಂತ ರಾಜಕಾರಣಿಗಳಿಂದಾಗಿ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಇದರಿಂದ ನನಗೇನು ಪರಿಣಾಮಗಳು ಬೀರಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.