ಬೆಂಗಳೂರು: ಮಂಗಳವಾರ ಬಿಜೆಪಿ ಸೇರಿದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಗೆ ಸಂಸದ ತೇಜಸ್ವಿ ಸೂರ್ಯ ತಮಿಳಿನಲ್ಲಿ ಶುಭಾಷಯ ಕೋರಿದ್ದರು.
ಟ್ವಿಟರ್ ನಲ್ಲಿ ತೇಜಸ್ವಿ ಸೂರ್ಯ ಹಾಕಿದ ಟ್ವೀಟ್‍ಗೆ ಕನ್ನಡಿಗರು ಗರಂ ಆಗಿದ್ದಾರೆ. ಕನ್ನಡನಾಡಿನಿಂದ ಸಂಸದರಾಗಿ ಆಯ್ಕೆಯಾದ ನೀವು ಕನ್ನಡಕ್ಕೆ ದ್ರೋಹ ಮಾಡುತ್ತಿದ್ದೀರಿ. ಮಾತೃಭಾಷೆ ತಮಿಳು ಆಗಿದ್ದರೂ ಅಣ್ಣಾಮಲೈ ಕನ್ನಡದಲ್ಲೇ ಮಾತನಾಡುತ್ತಾರೆ. ಅವರನ್ನು ನೋಡಿ ಕಲಿಯಿರಿ. ಕನ್ನಡಿಗನಾಗಿದ್ದು, ಕನ್ನಡಕ್ಕೆ ಡ್ರೋಹ ಬಗೆಯುವ ನೀವು ಯಾವ ರಾಜಕೀಯ ಉದ್ದೇಶಕ್ಕೆ ತಮಿಳಿನಲ್ಲಿ ಶುಭಾಷಯ ತಿಳಿಸಿದ್ದೀರಿ. ಕನ್ನಡದಲ್ಲಿ ಶುಭಾಷಯ ತಿಳಿಸಿದ್ದರೆ ನಷ್ಟ ಏನು ಆಗುತ್ತಿತ್ತು ಎಂದು ನೆಟ್ಟಿಗರು ತೇಜಸ್ವಿ ಸೂರ್ಯ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಗಣೇಶ ಹಬ್ಬ ಹಾಗೂ ಪರ್ಯೂಷಣ್ ದಿನದಂದು ತೇಜಸ್ವಿ ಸೂರ್ಯ ಹಿಂದಿಯಲ್ಲಿ ಶುಭಾಷಯ ಕೋರಿದ್ದ ವಿಡಿಯೋ ಕೂಡ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.
ಕೆಲವರಂತೂ ತೇಜಸ್ವಿ ಸೂರ್ಯ ಅವರನ್ನು ಕೆಟ್ಟ ಪದಗಳಿಂದ ಟೀಕಿಸಿದ್ದರೆ, ಮತ್ತೆ ಕೆಲವರು ಏಕವಚನದಿಂದ ನಿಂದಿಸಿದ್ದಾರೆ. ದುಡ್ಡು ಬೇಕು ಅಂದ್ರೆ ಬಿಜೆಪಿ ಸೇರಬೇಕು..ನೀವು ಕನ್ನಡಿಗನೆಂದು ಮರೆತು ಹೋಯಿತೇ ಸೂರ್ಯ ಎಂದು ರಮೇಶ್ ಟಿ.ಎಸ್ ಎಂಬುವರು ಖಂಡಿಸಿದ್ದರೆ, ನಿಮ್ಮ ತಮಿಳು ಟ್ವೀಟ್‍ಗೆ ಸ್ಪಷ್ಟನೆ ಕೊಡ್ತಿರಾ ಎಂದು ಚಂದನ್ ಎಂಬುವರು ಪ್ರಶ್ನಿಸಿದ್ದಾರೆ.