ಧೋನಿ ಜೊತೆಗಿನ ಬ್ರೇಕಪ್ ಬಗ್ಗೆ ಬಾಯ್ಬಿಟ್ಟ ಲಕ್ಷ್ಮೀ ms-dhoni saaksha tv
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಸೌತ್ ಸಿನಿಮಾ ಇಂಡಸ್ಟ್ರೀಯ ಹಾಟ್ ಬ್ಯೂಟಿ ಲಕ್ಷ್ಮಿ ರಾಯ್ ನಡುವೆ ಲವ್ ಟ್ರ್ಯಾಕ್ ಇದ್ದದ್ದು ಈಗ ಇತಿಹಾಸ.
2008ರಲ್ಲಿ ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿ ನಾಯಕರಾಗಿದ್ದರು. ಅದೇ ಸಮಯದಲ್ಲಿ ಲಕ್ಷ್ಮಿ ರಾಯ್ ತಂಡದ ಪ್ರಚಾರಕರಾಗಿದ್ದರು. ಆ ವೇಳೆ ಇಬ್ಬರ ನಡುವೆ ಸ್ನೇಹ ಚಿಗುರಿತ್ತು. ಆ ಸ್ನೇಹ ಬಳಿಕ ಪ್ರೇಮವಾಗಿತ್ತು ಎಂದು ಹೇಳಲಾಗುತ್ತಿತ್ತು. ಆಗ ಈ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಅನ್ನೋ ಸುದ್ದಿ ಭಾರಿ ಹಲ್ ಚಲ್ ಸೃಷ್ಟಿ ಮಾಡಿತ್ತು.
ಆದ್ರೆ ಈ ಇಬ್ಬರ ನಡುವಿನ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. 2009 ರಲ್ಲಿ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡರು.
ನಂತರ ಧೋನಿ ಸಾಕ್ಷಿ ಅವರ ಕೈ ಹಿಡಿದರು. ಆದ್ರೆ ಲಕ್ಷ್ಮೀ ಮಾತ್ರ ಇಂದಿಗೂ ಮದುವೆಯಾಗದೇ ಉಳಿದಿದ್ದಾರೆ.
ಈ ಮಧ್ಯೆ ಸಂದರ್ಶನ ಒಂದರಲ್ಲಿ ಲಕ್ಷ್ಮೀ ರಾಯ್, ಧೋನಿ ಜೊತೆಗಿನ ಬ್ರೇಕಪ್ಬಗ್ಗೆ ಬಹಿರಂಗವಾಗಿ ಮಾತನಾಡಿದ್ಧಾರೆ. ಧೋನಿ ಜೊತೆಗಿನ ರಿಲೇಷನ್ ತಮ್ಮ ಜೀವನದಲ್ಲಿ ವಾಸಿಯಾಗದ ಗಾಯದಂತಾಗಿದೆ. ಧೋನಿ ಜೊತೆ ಬ್ರೇಕಪ್ ಆಗಿ ಹನ್ನೆರಡು ವರ್ಷಗಳು ಕಳೆದಿವೆ..ಆದ್ರೂ ಈ ವಿಷಯ ಇನ್ನೂ ನನ್ನನ್ನು ಕಾಡುತ್ತಿದೆ. ಮಾಧ್ಯಮಗಳಲ್ಲಿ ಧೋನಿ ಬಗ್ಗೆ ಚರ್ಚೆ ನಡೆಯುತ್ತಿದ್ದರೆ.. ಅಲ್ಲಿ ನನ್ನ ಹೆಸರು ಪ್ರಸ್ತಾಪವಾಗುತ್ತದೆ ಎಂದು ಗರಂ ಆಗಿದ್ದಾರೆ.
ನಾವಿಬ್ಬರೂ ದೂರ ಆಗಿದ್ದರೂ ಒಬ್ಬರ ಮೇಲೋಬ್ಬರಿಗೆ ಗೌರವವಿದೆ. ನನ್ನ ಜೊತೆಗಿನ ಬ್ರೇಕ್ ಅಪ್ ನಂತರ ಧೋನಿ ಜೀವನದಲ್ಲಿ ಸಾಕಷ್ಟು ಬ್ರೇಕಪ್ ಗಳಾಗಿವೆ. ಆದ್ರೆ ಅದರ ಬಗ್ಗೆ ಯಾರು ಗಮನಿಸುವುದಿಲ್ಲ. ನನ್ನ ವಿಚಾರ ಮಾತ್ರ ಮುನ್ನೆಲೆಗೆ ಬರುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.









