‘ನೇಗಿಲ ಯೋಗಿ’ಯಾದ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್
ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಐಪಿಎಲ್ ಹೊರೆತುಪಡಿಸಿ ಉಳಿದ ಎಲ್ಲಾ ಮಾದರಿ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
ಐಪಿಎಲ್ ನಲ್ಲಿ ಚೆನ್ನೈ ಪರ ಆಡುವ ಧೋನಿ ಉಳಿದ ಸಮಯದಲ್ಲಿ ಕೃಷಿ ಮಾಡುತ್ತಿದ್ದಾರೆ. ಇದೇನೋ ಟೈಂ ಪಾಸ್ ಗಾಗಿ ಅಲ್ಲ, ಬದಲಿಗೆ ಧೋನಿ ಪೂರ್ತಿಯಾಗಿ ರೈತನಾಗಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಧೋನಿ ತಮ್ಮ ತೋಟದಲ್ಲಿ ಎಲೆಕೋಸು, ಶುಂಠಿ ಮತ್ತು ಕ್ಯಾಪ್ಸಿಕಂನಂತಹ ವಿವಿಧ ತರಕಾರಿಗಳು ಮತ್ತು ಸ್ಟ್ರಾಬೆರಿಗಳನ್ನು ಬೆಳೆಯುತ್ತಿದ್ದಾರೆ.
ಇತ್ತೀಚೆಗಷ್ಟೇ ಜಮೀನಿಗೆ ಬೆಳೆ ಪರಿಶೀಲನೆಗೆ ತೆರಳಿದ್ದ ಧೋನಿ ತಮ್ಮ ಕೃಷಿ ಸಲಹೆಗಾರ ರೋಷನ್ ಅವರೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟಿದ್ದರು.
https://twitter.com/thebrainofmsd/status/1482628428033495043?ref_src=twsrc%5Etfw%7Ctwcamp%5Etweetembed%7Ctwterm%5E1482628428033495043%7Ctwgr%5E%7Ctwcon%5Es1_c10&ref_url=https%3A%2F%2Fwww.sakshi.com%2Ftelugu-news%2Fsports%2Fdhoni-farming-mustard-crop-ranchi-farmhouse-1429112
ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಧೋನಿಗೆ ತರಕಾರಿಗಳೆಂದರೆ ಹೆಚ್ಚು ಒಲವಿದ್ದು, ರಾಂಚಿಗೆ ಬಂದಾಗಲೆಲ್ಲಾ ತಾವು ಬೆಳೆದ ತರಕಾರಿಯನ್ನೇ ತಿನ್ನುತ್ತಾರೆ ಎಂದು ರೋಷನ್ ಹೇಳಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ ಗಾಗಿ ಚೆನ್ನೈ ಫ್ರಾಂಚೈಸಿ, 12 ಕೋಟಿ ರೂಪಾಯಿಗೆ ಎಂಎಸ್ ಧೋನಿಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದೆ. ವಯಸ್ಸಿನ ಕಾರಣದಿಂದ ಈ ವರ್ಷ ಐಪಿಎಲ್ ಗೆ ವಿದಾಯ ಹೇಳುವ ಅವಕಾಶವಿದೆ.








