IPL ನ ಲಯನ್ ಯಾರು..?
ಮುಂದಿನ ಎರಡು ತಿಂಗಳ ಕಾಲ ಭಾರತ ಐಪಿಎಲ್ ಮಯವಾಗಿರುತ್ತದೆ. ಗಲ್ಲಿಯಿಂದ ಹಿಡಿದು ಡೆಲ್ಲಿಯವರೆಗೂ ಐಪಿಎಲ್ ಮಾತು ಜೋರಾಗಿರುತ್ತದೆ.
ಎಲ್ಲೆಲ್ಲೂ ಇಂಡಿಯಲ್ ಪ್ರಿಮಿಯರ್ ಲೀಗ್ ಹವಾ ನಡೆಯುತ್ತಿರುತ್ತದೆ. ಪ್ರತಿ ವರ್ಷ ಐಪಿಎಲ್ ಬಂದಾಗಲೂ ಹೊಸ ವಿಚಾರಗಳ ಬಗ್ಗೆ ಚರ್ಚಿಸೋದು, ಹಳೆಯ ದಾಖಲೆಗಳ ಮೆಲುಕು ಹಾಕೋದು ನಡೆಯುತ್ತಲೇ ಇರುತ್ತದೆ.
ಅದರಂತೆ ಇದೀಗ ಇಂಡಿಯಲ್ ಪ್ರಿಮಿಯರ್ ಲೀಗ್ ನ ಲಯನ್ ಯಾರು ಎಂಬ ಚರ್ಚೆಯೊಂದು ಮುನ್ನಲೆಗೆ ಬಂದಿದೆ.
ಟೀಂ ಇಂಡಿಯಾದ ಮಾಜಿ ನಾಯಕರಾದ ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಲಯನ್ ಅನ್ನೋದು ಸದ್ಯದ ಚರ್ಚೆಯಾಗಿದೆ.
ಸಾಮಾನ್ಯವಾಗಿ ಸಿಎಸ್ ಕೆ ಅಭಿಮಾನಿಗಳು ಧೋನಿಯೇ ಐಪಿಎಲ್ ನ ಲಯನ್ ಎನ್ನುತ್ತಿದ್ದರೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನ ಐಪಿಎಲ್ ಲಯನ್ ಎನ್ನುತ್ತಿದ್ದಾರೆ. ಇದು ನಿರೀಕ್ಷತವೂ ಹೌದು..!
ಅಂದಹಾಗೆ ಇಲ್ಲಿ ಯಾರು ಲಯನ್ ಅನ್ನೋದಕ್ಕಿಂತ ಇಬ್ಬರೂ ಶ್ರೇಷ್ಠ ಕ್ರಿಕೆಟಿಗರು. ಭಾರತೀಯ ಕ್ರಿಕೆಟ್ ನಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ.
ಎಂ.ಎಸ್.ಧೋನಿ ನಾಯಕರಾಗಿ ಭಾರತಕ್ಕೆ ಎರಡೆರಡು ವಿಶ್ವಕಪ್ ಗಳನ್ನು ಗೆದ್ದುಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ನಾಯಕನಾಗಿ, ಆಟಗಾರನಾಗಿ ಭಾರತದ ಸೇವೆ ಮಾಡಿದ್ದಾರೆ. ಟೀಂ ಇಂಡಿಯಾದ ಮಟ್ಟಿಗೆ ಎಂಎಸ್ ಧೋನಿ ಶ್ರೀ ಕೃಷ್ಣನಾದ್ರೆ, ವಿರಾಟ್ ಕೊಹ್ಲಿ ಅರ್ಜುನ್ ನಂತಿದ್ದರು.
ಆದ್ರೆ ಐಪಿಎಲ್ ವಿಚಾರಕ್ಕೆ ಬಂದ್ರೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ, ವಿರಾಟ್ ಕೊಹ್ಲಿ ಆರ್ ಸಿಬಿ ಪರವಾಗಿ ಕಾಣಿಸಿಕೊಂಡಿದ್ದಾರೆ.
ಇಬ್ಬರೂ ಆಟಗಾರರು ತಮ್ಮ ತಮ್ಮ ತಂಡದ ಪರವಾಗಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಧೋನಿ ಸಿಎಸ್ ಕೆ ನಾಯಕನಾಗಿ ತಂಡವನ್ನ ನಾಲ್ಕು ಬಾರಿ ಚಾಂಪಿಯಲ್ ಆಗಿದ್ದಾರೆ.
ಇತ್ತ ವಿರಾಟ್ ಕೊಹ್ಲಿ ಆರ್ ಸಿಬಿ ತಂಡದ ಆಟಗಾರನಾಗಿ ತಂಡಕ್ಕಾಗಿ ಸಾಕಷ್ಟು ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ.
ನಾಯಕತ್ವ ವಿಚಾರದಲ್ಲಿ ಧೋನಿ ಐಪಿಎಲ್ ನ ಲಯನ್ ಆದ್ರೆ ಬ್ಯಾಟಿಂಗ್ ವಿಚಾರದಲ್ಲಿ ವಿರಾಟ್ ಕೊಹ್ಲಿ ಐಪಿಎಲ್ ನ ಲಯನ್ ಆಗಿದ್ದಾರೆ.
ಆದ್ರೆ ಒಬ್ಬರು ಲಯನ್ ಅನ್ನೋದು ತಪ್ಪಾಗುತ್ತದೆ. ಯಾಕಂದ್ರೆ ಇಬ್ಬರು ತಮ್ಮದೇಯಾದ ಸಾಧನೆ ಮೂಲಕ ತಮ್ಮ ಗುರುತಿಸಿಕೊಂಡಿದ್ದಾರೆ.









