MS Dhoni | ನಂಬರ್ 7 ರ ಹಿಂದೆ ಇರುವ ಮಿಸ್ಟರಿ..!!
ಕ್ರೀಡಾ ಆಟಗಾರರಿಗೆ ತಮ್ಮದೇ ಯಾದ ಜೆರ್ಸಿ ನಂಬರ್ ಇರುತ್ತೆ. ಆ ಜೆರ್ಸಿ ನಂಬರ್ ಅನ್ನು ತಾವು ನಿವೃತ್ತಿಯಾಗುವವರೆಗೂ ಯಾರಿಗೂ ಕೊಡೋದಿಲ್ಲ.
ಉದಾಹರಣೆಗೆ ಫುಟ್ ಬಾಲ್ ಸ್ಟಾರ್ ಆಟಗಾರರಾದ ಲಿಯೋನೆಲ್ ಮೆಸ್ಸಿ (ಜರ್ಸಿ ಸಂಖ್ಯೆ 10), ಲೆಬ್ರಾನ್ ಜೇಮ್ಸ್ (ಜೆರ್ಸಿ ಸಂಖ್ಯೆ 23), ಕ್ರಿಸ್ಟಿಯಾನೋ ರೊನಾಲ್ಡೊ (ಜೆರ್ಸಿ ಸಂಖ್ಯೆ 7), ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ (ಜೆರ್ಸಿ ಸಂಖ್ಯೆ 10), ವಿರಾಟ್ ಕೊಹ್ಲಿ ( ಜರ್ಸಿ ನಂಬರ್ 18), ಯುವರಾಜ್ ಸಿಂಗ್ ಜೆರ್ಸಿ ನಂಬರ್ 12.
ಅದೇ ರೀತಿ ಭಾರತಕ್ಕೆ ಎರೆಡೆರಡು ವಿಶ್ವಕಪ್ ಗೆದ್ದುಕೊಟ್ಟ ಮಹೇಂದ್ರ ಸಿಂಗ್ ಧೋನಿ ಕೂಡ ತಮ್ಮ ನಿವೃತ್ತಿಯುದ್ದಕ್ಕೂ ಜೆರ್ಸಿ ನಂಬರ್ 7 ರಲ್ಲಿ ಕಾಣಿಸಿಕೊಂಡರು.
ಅಂತರಾಷ್ಟ್ರೀಯ ಪಂದ್ಯಗಳ ಸಮಯದಲ್ಲಿ.. ಪ್ರಸ್ತುತ ಐಪಿಎಲ್‌ನಲ್ಲೂ ಧೋನಿ ನಂಬರ್-7 ಜೆರ್ಸಿಯೊಂದಿಗೆ ಆಡುವುದನ್ನು ನಾವು ನೋಡುತ್ತೇವೆ.
7ನೇ ನಂಬರ್ ಜೆರ್ಸಿ ಧರಿಸಿರುವ ಧೋನಿ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ನಾನಾ ರೀತಿಯಾಗಿ ಅಂದಾಜಿಸಿದ್ದಾರೆ.
ಆದರೆ, ಇತ್ತೀಚೆಗಷ್ಟೇ ನಂಬರ್-7ರ ಹಿಂದಿನ ಮರ್ಮವನ್ನು ಧೋನಿ ವಿವರಿಸಿದ್ದು, ತಮ್ಮ ಜನ್ಮದಿನ 7 ಆಗಿರುವುದರಿಂದಲೇ ನಂಬರ್ 7 ಜೆರ್ಸಿ ಧರಿಸೋದಾಗಿ ತಿಳಿಸಿದ್ದಾರೆ.
ಐಪಿಎಲ್ ಆರಂಭವಾಗುವ ಹಿನ್ನಲೆಯಲ್ಲಿ ಧೋನಿ ಸಂದರ್ಶನವೊಂದರಲ್ಲಿ ಮಾತನಾಡಿದ್ದು, “ಸಂಖ್ಯೆ-7 ನನಗೆ ಅದೃಷ್ಟದ ಸಂಖ್ಯೆ ಎಂದು ಹಲವರು ಭಾವಿಸುತ್ತಾರೆ.
ಆದರೆ ಅಂಥದ್ದೇನೂ ಇಲ್ಲ. ವಾಸ್ತವವಾಗಿ ಜುಲೈ 7 ನನ್ನ ಜನ್ಮದಿನ. ಏಳನೇ ತಿಂಗಳಲ್ಲಿ .. ನಾನು ಏಳನೇ ತಾರೀಖಿನಂದು ಜನಿಸಿದೆ. ಹಾಗಾಗಿ ಆ ನಂಬರ್ ನನಗೆ ತುಂಬಾ ಇಷ್ಟವಾಯಿತು.
ನಾನು ಹುಟ್ಟಿದ್ದು 1981 ರಲ್ಲಿ. ಅದರಲ್ಲಿ ಕೊನೆಯ ಎರಡು ಅಂಕೆಗಳನ್ನು ನೋಡಿದಾಗ .. (8-1 = 7) .. ಇಲ್ಲಿ 7 ಕಾಮನ್ ಸಂಖ್ಯೆಯಾಗಿದೆ.
ಅದಕ್ಕಾಗಿಯೇ ನನ್ನ ಹೃದಯದಲ್ಲಿ ನಂಬರ್ 7ಕ್ಕೆ ಪ್ರತ್ಯೇಕವಾದ ಸ್ಥಾನ ನೀಡಿದ್ದೇನೆ. ಹೀಗಾಗಿಯೇ ನಾನು ಆ ನಂಬರ್ ಅನ್ನು ಯಾರಿಗೂ ಕೊಟ್ಟಿಲ್ಲ, ಕೊಡೋದು ಇಲ್ಲ ಎಂದಿದ್ದಾರೆ ಎಂ.ಎಸ್.ಧೋನಿ.









