Dhoni | ಎಲ್ಲವೂ ಬಿಡ್ಸಿ ಬಿಡ್ಸಿ ಹೇಳೋಕೆ ಆಗುತ್ತಾ.. ಜೆಡ್ಡು ಕ್ಯಾಪ್ಟನ್ಸಿ ಬಗ್ಗೆ ಧೋನಿ ಅಸಮಾಧಾನ
‘‘ಮುಂಬರುವ ಆವೃತ್ತಿಗೆ ತಾವೇ ನಾಯಕರಾಗುತ್ತಾರೆ ಎಂಬುದು ಜಡೇಜಾಗೆ ತುಂಬಾ ಚೆನ್ನಾಗಿ ಗೊತ್ತಿದೆ. ನಾಯಕನಾಗಿ ತನ್ನನ್ನು ತಾನು ಸಾಬೀತುಪಡಿಸಲು ಅವರಿಗೆ ಸಾಕಷ್ಟು ಸಮಯವಿತ್ತು. ನಾಯಕತ್ವ ಬದಲಾವಣೆ ಆಗಬೇಕು ಎಂದುಕೊಂಡಿದ್ದೆ.
ಜಡೇಜಾ ನಾಯಕನಾಗರಬೇಕು ಎಂದ ಬಯಸಿದ್ದೆ. ಮೊದಲೆರಡು ಪಂದ್ಯಗಳಲ್ಲಿ ಜಡ್ಡುಗೆ ಸಹಾಯ ಮಾಡಿದ್ದೆ. ಆದರೆ ನಂತರ ಬೌಲಿಂಗ್ ಮತ್ತು ಫೀಲ್ಡಿಂಗ್ ಸೆಟ್ ನಲ್ಲಿ ಜೆಡ್ಡು ಸ್ವಂತ ನಿರ್ಧಾರ ತೆಗೆದುಕೊಳ್ಳಲು ನಾನು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ ಹೇಳಿದ್ದಾರೆ
ಹೈದರಾಬಾದ್ ತಂಡದ ವಿರುದ್ದದ ಪಂದ್ಯಕ್ಕೂ ಮುನ್ನಾ ಜಡೇಜಾ ಚೆನ್ನೈ ತಂಡದ ನಾಯಕತ್ವದಿಂದ ಕೆಳಗಿಳಿದ್ರು. ಇದರಿಂದ ಮತ್ತೆ ಧೋನಿ ಕ್ಯಾಪ್ಟನ್ಸಿ ವಹಿಸಬೇಕಾಯ್ತು.

ಧೋನಿ ತಮ್ಮ ನಾಯಕತ್ವದ ಮೊದಲ ಪಂದ್ಯದಲ್ಲಿಯೇ ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇನ್ನು ಪಂದ್ಯದ ಬಳಿಕ ಜಡೇಜಾ ಬಗ್ಗೆ ಮಾತನಾಡಿದ ಧೋನಿ, ಜಡೇಜಾ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡಿದರು. ನಾಯಕನಾದವನು ಮೈದಾನದಲ್ಲಿ ಕಾಲಕಾಲಕ್ಕೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಕೇವಲ ಟಾಸ್ ಗೆ ಮಾತ್ರ ನಾನು ಕ್ಯಾಪ್ಟನ್.. ಉಳಿದಿದ್ದೆಲ್ಲವೂ ಬೇರೆ ಯಾರೋ ಮಾಡುತ್ತಾರೆ ಅನ್ನೋ ಭಾವನೇ ಬರಬಾರದು ಎಂದು ಮೊದಲೆರೆಡು ಪಂದ್ಯಗಳನ್ನು ಬಿಟ್ಟರೇ ನಾನು ಉಳಿದ ಪಂದ್ಯಗಳಲ್ಲಿ ಜೋಕ್ಯ ಮಾಡಿಕೊಳ್ಳಲಿಲ್ಲ.
ಕ್ರಮೇಣ ನಾಯಕತ್ವ ಬದಲಾವಣೆ ಆಗಬೇಕು ಎಂದು ನಾನು ಬಯಸಿದ್ದೆ. ನಾಯಕನಾದವರು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಅಲ್ಲದೇ ಅವುಗಳಿಗೆ ಬದ್ಧರಾಗಿರಬೇಕು.
ಪ್ರತಿ ವಿಚಾರವನ್ನು ಬಿಡ್ಸಿ ಬಿಡ್ಸಿ ಹೇಳುತ್ತಾ ಸ್ಪೂನ್ ಪೀಡಿಂಗ್ ಮಾಡಿಕೊಟ್ಟರೇ ಕ್ಯಾಪ್ಟನ್ಸಿ ಮಾಡಬಹುದು ಎಂದುಕೊಂಡರೇ ಅದು ಭವಿಷ್ಯಕ್ಕೆ ಉಪಯೋಗಕ್ಕೆ ಬರುವುದಿಲ್ಲ ಎಂದಿದ್ದಾರೆ ಧೋನಿ.
ms-dhoni-says-spoon-feeding-does-not-help-captain








