ಯಾವುದಾದ್ರು ನೀಡಿ ಆದ್ರೆ ಅಬಕಾರಿ ಖಾತೆ ಮಾತ್ರ ಬೇಡ : ಎಂಟಿಬಿ
ಬೆಂಗಳೂರು : ಜನಪರ ಕೆಲಸ ಮಾಡುವ ಯಾವುದೇ ಖಾತೆ ನೀಡಿ ನೀಡಿದರೂ ನಿಭಾಯಿಸುತ್ತೇನೆ. ಆದ್ರೆ ಅಬಕಾರಿ ಇಲಾಖೆ ಖಾತೆ ಮಾತ್ರ ಬೇಡ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಇಂದು ರಾಜ್ಯ ಸಚಿವ ಸಂಪುಟ ರಚನೆಯಾಗಿದ್ದು, ಎಂಟಿಬಿನಾಗರಾಜ್ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಖಾತೆ ಬಗ್ಗೆ ಮಾತನಾಡಿ, ನಾನು ಈ ಹಿಂದೆಯೂ ಅಬಕಾರಿ ಖಾತೆ ಬೇಡ ಎಂದು ಹೇಳಿದ್ದೆ. ಈಗಲೂ ನನಗೆ ಅಬಕಾರಿ ಖಾತೆ ಬೇಡ ಎಂದು ಹೇಳುತ್ತೇನೆ. ಬಡಜನರ, ಕಾರ್ಮಿಕರ ಪರ ಹಾಗೂ ಜನಪರವಾದ ಕೆಲಸ ಮಾಡುವಂತಹ ಬೇರೆ ಯಾವುದೇ ಖಾತೆ ಕೊಟ್ಟರು ನಿರ್ವಹಿಸಲು ಸಿದ್ಧ ಎಂದರು.
ಇನ್ನು ಮಿತ್ರಮಂಡಳಿಯ ಕೆಲವರಿಗೆ ಸಚಿವಸ್ಥಾನ ಕೈತಪ್ಪಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂಟಿಬಿ, ಆರ್.ಶಂಕರ್, ಶ್ರೀಮಂತಪಾಟೀಲ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಹೆಚ್.ವಿಶ್ವನಾಥ್ ಗೂ ಸ್ಥಾನ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಸ್ಥಾನಮಾನ ನೀಡಬೇಕು ಎಂದು ನಾವೆಲ್ಲರೂ ಸಿಎಂ ಬಳಿ ಚರ್ಚೆ ಮಾಡಬೇಕು ಎಂದುಕೊಂಡಿದ್ದೇವೆ ಎಂದು ಹೇಳಿದರು.