ಸಿಎಂ ವಿರುದ್ಧ `ಗರಂ ಆಗಿದ್ದ ಎಂಟಿಬಿ ನಾಗರಾಜ್ ಈಗ ಥಂಡಾ’
ಬೆಂಗಳೂರು : ಖಾತೆ ಹಂಚಿಕೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಫುಲ್ ಗರಂ ಆಗಿದ್ದ ಸಚಿವ ಎಂಟಿಬಿ ನಾಗರಾಜ್ ಇದೀಗ ಫುಲ್ ಥಂಡಾ ಆಗಿದ್ದಾರೆ.
ಅಲ್ಲದೆ ಸದ್ಯದ ಪೌರಾಡಳಿತ ಖಾತೆಯನ್ನೇ ಒಪಿಕೊಂಡು ಅದರಲ್ಲೇ ಮುಂದುವರೆಯುವಾಗಿ ತಿಳಿಸಿದ್ದಾರೆ.
ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದರು.
ಇದರ ಬೆನ್ನಲ್ಲೆ ಎಂಟಿಬಿ ನಾಗರಾಜ್ ಅಸಮಾಧಾನ ಹೊರಹಾಕಿದರು. ಇದೇ ವಿಚಾರವಾಗಿ ಇಂದು ಎಂಟಿಬಿ ನಾಗರಾಜ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು.
ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ವಸತಿ ಖಾತೆ ನೀಡಬೇಕು ಎಂಬುದು ನನ್ನ ಬೇಡಿಕೆ. ಅದು ಸಾಧ್ಯವಾಗದಿದ್ದರೆ ಜನಪರ ಕೆಲಸ ಮಾಡುವ ಬೇರೆ ಯಾವುದೇ ಖಾತೆ ನೀಡಲಿ.
ಒಟ್ಟಾರೆ ಉತ್ತಮ ಖಾತೆ ನೀಡಬೇಕು ಎಂಬುದು ನನ್ನ ಬೇಡಿಕೆಯಾಗಿತ್ತು. ಇದೇ ವಿಚಾರವಾಗಿ ಸಿಎಂ ಭೇಟಿಯಾಗಿ ಚರ್ಚಿಸಿದ್ದೇನೆ.
ಮುಂದಿನ ದಿನಗಳಲ್ಲಿ ವರಿಷ್ಠರ ಬಳಿ ಚರ್ಚಿಸಿ ತೀರ್ಮಾನಿಸುವುದಾಗಿ ಸಿಎಂ ಹೇಳಿದ್ದಾರೆ. ಈಗ ನನಗೆ ಯಾವುದೇ ಅಸಮಾಧಾನವಿಲ್ಲ.
ಸಿಎಂ ಕೊಟ್ಟ ಭರವಸೆಯಿಂದ ಸಂತಸವಾಗಿದೆ. ಹಾಗಾಗಿ ಈಗಿರುವ ಖಾತೆಯಲ್ಲಿಯೇ ಮುಂದುವರೆಯುತ್ತೇನೆ ಎಂದು ಸ್ಪಷ್ಟಪಡಿಸಿದರು.









