ಮುಡಾ (Muda) ನ ವಿಶೇಷ ನಿವೇಶನ ಹಂಚಿಕೆಯಲ್ಲಿ ಈಗಾಗಲೇ ಅಕ್ರಮ ಆರೋಪಗಳು ಕೇಳಿ ಬಂದಿರುವುದು ಒಂದೆಡೆಯಾದರೆ, ಇದೀಗ ಮತ್ತೊಂದೆಡೆ 15,000ಕ್ಕೂ ಹೆಚ್ಚು ನಿವೇಶನಗಳನ್ನು ಪೆಂಡಿಂಗ್ ಇಟ್ಟುಕೊಂಡಿರುವುದು ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಮುಡಾದಿಂದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಗೊಳ್ಳಬೇಕಾದ ಖಾಸಗಿ ಬಡಾವಣೆಗಳು ಇನ್ನೂ ಹಸ್ತಾಂತರವಾಗಿಲ್ಲ. 21 ಗ್ರಾಪಂ (ಗ್ರಾಮ ಪಂಚಾಯತ್) ಹಾಗೂ 202 ನಗರ (ಶಹರ) ಸೇರಿದಂತೆ ಒಟ್ಟು 15,085 ನಿವೇಶನಗಳ ಹಸ್ತಾಂತರಕ್ಕೆ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ ಎಂದು ವರದಿಯಾಗಿದೆ.
ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ
ರಾಜ್ಯ ಸರ್ಕಾರದ ಎಸ್ಎಸ್ಎಲ್ ಸಿ ಪರೀಕ್ಷೆಯ ತೃತೀಯ ಭಾಷೆ ನೀತಿಗೆ ಇದೀಗ ಹೊಸ ತಿರುವು ಸಿಕ್ಕಿದೆ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ...








