ಕಾರ್ ರೇಸ್ ಇಷ್ಟ ಪಡೋರಿಗೆ ಮಡ್ಡಿ ಸಿನಿಮಾ ಬೆಸ್ಟ್ ಚಾಯ್ಸ್ muddy saaksha tv
ಇಂಡಿಯಾ ವರ್ಸಸ್ ಪಾಕಿಸ್ತಾನ ಮ್ಯಾಚ್ ಅಂದ್ರೆ ಜನ ಜಾಕತ ಪಕ್ಷಿಗಳಂತೆ ಕಾದಿರ್ತಾರೆ. ಅದೇ ಇಂಡಿಯಾ ಅಫ್ಘಾನಿಸ್ತಾನ್ ಮ್ಯಾಚ್ ಅಂದ್ರೆ ಹೆಚ್ಚು ಕುತೂಹಲ ಇರಲ್ಲ. ಇಲ್ಲಿ ಟೀಂ ಇಂಡಿಯಾ ಎರಡೂ ತಂಡಗಳ ವಿರುದ್ಧ ಕ್ರಿಕೆಟ್ ಅನ್ನೇ ಆಡುತ್ತೆ. ಆದ್ರೆ ಎಮೋಷನ್ ಬೇರೆ ಬೇರೆ ಆಗಿರುತ್ತೆ. ಅದೇ ರೀತಿ ಸಿನಿಮಾ ಕೂಡ.
ಯಾವುದೇ ಸಿನಿಮಾ ಆಗಿರಲಿ, ಚಿತ್ರದಲ್ಲಿನ ಎಮೋಷನ್ ಗೆ ಜನರು ಕನೆಕ್ಟ್ ಆಗಿದ್ದಾರೆ ಅಂದ್ರೆ ಸಿನಿಮಾ ಹೇಗೆ ಇರಲಿ ಜಯ ಸಾಧಿಸುತ್ತೆ. ಅಂದಹಾಗೆ ಪ್ರತಿ ಎಮೋಷನ್ ಹಿಂದೆ ಒಂದು ಕಥೆ ಇರುತ್ತೆ. ಯಾವುದೇ ಸಿನಿಮಾ ಆಗಿರಲಿ, ಕಥೆಯ ಎಮೋಷನ್ ಗೆ ಜನ ಕನೆಕ್ಟ್ ಆದ್ರೆ ಸಿನಿಮಾ ಹಿಟ್ ಆದ್ದಂತೆ. ಅದೇ ಸಿನಿಮಾದಲ್ಲಿ ಈ ಅಂಶಗಳಿಲ್ಲದೇ ದೊಡ್ಡ ದೊಡ್ಡ ಟೆಕ್ನಿಷಿಯನ್ಸ್ ಕೆಲಸ ಮಾಡಿದ್ರೂ ಜನರನ್ನ ರೀಚ್ ಆಗೋಕೆ ಆಗಲ್ಲ.
ಅಂದಹಾಗೆ ನಾವು ಇವತ್ತು ಮಾತಾಡೋಕೆ ಹೊರಟಿರೋದು ಮಡ್ಡಿ ಸಿನಿಮಾದ ಬಗ್ಗೆ. ಆರು ಭಾಷೆಗಳಲ್ಲಿ ರಿಲೀಸ್ ಆಗಿರುವ ಮಡ್ಡಿ ಭಾರತದ ಮೊದಲ ಮಡ್ ರೇಸ್ ಬೇಸ್ಡ್ ಸಿನಿಮಾ. ಹೀಗಾಗಿ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಇದೀಗ ಸಿನಿಮಾ ರಿಲೀಸ್ ಆಗಿದ್ದು, ಆ ನಿರೀಕ್ಷೆಗಳನ್ನ ರೀಚ್ ಆಗಿದ್ಯಾ..? ಅನ್ನೋದನ್ನ ನಮ್ಮ ಸಮೀಕ್ಷೆಯಲ್ಲಿ ನೋಡೋಣ..
ಸಿನಿಮಾದ ಕಥೆ ವಿಚಾರಕ್ಕೆ ಬಂದ್ರೆ ಅಣ್ಣ- ತಮ್ಮಂದಿರ ಮಧ್ಯೆ ಎಷ್ಟೆ ಜಗಳ ಇದ್ರೂ ಸಮಸ್ಯೆ ಅಂತ ಬಂದಾಗ ಒಂದಾಗುತ್ತಾರೆ. ಇಬ್ಬರ ಒಬ್ಬರಲ್ಲಿ ಯಾರಿಗೇ ತೊಂದರೆ ಬಂದ್ರೂ ಇಬ್ರು ಒಂದಾಗ್ತಾರೆ. ಆ ಸ್ಟೋರಿ ಲೈನ್ ಗೆ ನಿರ್ದೇಶಕ ಪ್ರಗ್ಬಾಲ್ ಮಡ್ ರೇಸ್ ಟಚ್ ನೀಡಿದ್ದಾರೆ.
ಸಿನಿಮಾದಲ್ಲಿ ನಟಿಸಿರೋದು ಬಹುತೇಕ ಹೊಸಬರೇ ಆಗಿದ್ದು, ಬರೀ ಆಕ್ಷನ್, ಬಿಲ್ಡಪ್ ಸೀನ್ ಗಳಿಗೆ ಹೇಳಿ ಮಾಡಿಸಿದ್ದಂತೆ ಇದ್ದಾರೆ. ಆದ್ರೆ ಡೂಪ್ ಇಲ್ಲದೇ ರಿಸ್ಕಿ ಸೀನ್ ಗಳಲ್ಲಿ ನಟಿಸಿರೋದನ್ನ ಮೆಚ್ಚಿಕೊಳ್ಳಬೇಕು.
ಸಿನಿಮಾದ ಮೊದಲಾರ್ಧ ಫಸ್ಟ್ ಅಂಡ್ ಸೆಕೆಂಡ್ ಗೇರ್ ನಲ್ಲಿ ಕಾರು ಚಲಿಸುವಂತೆ ಇರುತ್ತೆ. ದ್ವಿತೀಯಾರ್ಧದಲ್ಲಿ ಕಾರು ಟ್ರ್ಯಾಕ್ ಗೆ ಬರುತ್ತದೆ. ಟಾಪ್ ಗೇರ್ ನಲ್ಲಿ ಸಿನಿಮಾ ಓಡುತ್ತೆ. ಮಡ್ ರೇಸ್ ಸೀನ್ ಗಳು, ಫ್ಯಾಮಿಲಿ ಸೆಂಟಿಮೆಂಟ್ಸ್, ಆಕ್ಷನ್ ಸೀಕ್ವೆನ್ಸ್ ಒಟ್ಟಾಗಿ ಮಿಕ್ಸ್ ಮಸಾಲೆಯಂತಿರುತ್ತದೆ.
ಇನ್ನು ಸಿನಿಮಾದ ಪ್ಲಸ್ ಪಾಯಿಂಟ್ ಅಂದರೇ ಕ್ಯಾಮೆರಾ ವರ್ಕ್, ಪ್ರತಿ ಸೀನ್ ಪ್ರೇಮ್ ವ್ಹಾವ್ ಎನ್ನುವಂತಿದೆ. ಜೊತೆಗೆ ರವಿ ಬಸ್ರೂರು ಅವರ ಹಿನ್ನಲೆ ಸಂಗೀತ ಸಿನಿಮಾಗೆ ಜೀವ ತುಂಬಿದೆ.
ಇನ್ನು ಮೊದಲಾರ್ಧದಲ್ಲಿ ತುಸು ಬೋರ್ ಎನಿಸಿದ್ರೂ ದ್ವಿತೀಯಾರ್ಧದಲ್ಲಿ ಜನರನ್ನ ರಂಜಿಸುವಲ್ಲಿ ನಿರ್ದೇಶಕ ಪ್ರಗ್ಬಾಲ್ ಯಶಸ್ವಿಯಾಗಿದ್ದಾರೆ.
ಒಟ್ಟಾರೆ ಕಥೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಅಡ್ವೆಂಜರ್ ಕಾರ್ ರೇಸ್ ಗಳನ್ನ ಇಷ್ಟಪಡುವರಿಗೆ ಮಡ್ಡಿ ಸಿನಿಮಾ ಬೆಸ್ಟ್ ಚಾಯ್ಸ್ ಆಗಿದೆ.









