ಸಿಎಂ ಆಗಿ ಕೇಜ್ರಿವಾಲ್ ಪದಗ್ರಹಣ.. ಕಾರ್ಯಕ್ರಮದಲ್ಲಿ ಗಮನ ಸೆಳೆದ ‘ಚೋಟ ಮಫ್ಲರ್’ ಮ್ಯಾನ್..
ಎಎಪಿ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಮೂರನೇ ಬಾರಿಗೆ ಸಿಎಂ ಆಗಿ ಗದ್ದುಗೆ ಅಲಂಕರಿಸಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಕೇಜ್ರಿವಾಲ್ ಸಹಸ್ರಾರು ಜನರ ಸಮ್ಮುಖದಲ್ಲಿ, ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ರು. ದೇವರ ಹೆಸರಲ್ಲಿ ರಾಜ್ಯಪಾಲರಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದ ಕೇಜ್ರಿವಾಲ್, ಅಖಂಡ ದೆಹಲಿ ಅಭಿವೃದ್ಧಿಯೇ ನನ್ನ ಮಂತ್ರ ಎಂದು ಹೇಳಿದ್ರು. ಇವರ ಜೊತೆಯಲ್ಲೇ ಆರು ಶಾಸಕರು , ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು..
ಇನ್ನು, ಪ್ರಮಾಣವಚನ ಸಮಾರಂಭದಲ್ಲಿ ಜ್ಯೂನಿಯರ್ ಕೇಜ್ರಿವಾಲ್, ಲಿಟಲ್ ಮಫ್ಲರ್ ಮ್ಯಾನ್ ಎಲ್ಲರ ಗಮನ ಸೆಳೆಯಿತು. ಪುಟ್ಟಬಾಲಕನಿಗೆ ವಿಶೇಷ ಆಹ್ವಾನ ನೀಡಲಾಗಿತ್ತು. ಫೆಬ್ರವರಿ 11ರಂದು ಫಲಿತಾಂಶ ಬಂದ ದಿನ ನೀವೆಲ್ಲಾ, ಈ ಚೋಟ ಮಫ್ಲರ್ ಮ್ಯಾನ್ ನ್ನ ನೋಡಿರ್ತೀರಾ. ಈ ಮಫ್ಲರ್ ಮ್ಯಾನ್ ಫೋಟೊ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸೊಷಿಯಲ್ ಮೀಡಿಯಾದಲ್ವಿ ಜ್ಯೂನಿಯರ್ ಕೇಜ್ರಿವಾಲ್ ಕಂಡ ನೆಟ್ಟಿಗರು, ತರಹೇವಾರಿ ಟ್ಚೀಟ್ ಮಾಡಿ ಸಖತ್ ಫೇಮಸ್ ಮಾಡಿದ್ರು. ಆಪ್ ಪಕ್ಷ ಕೂಡ ತನ್ನ
ಟ್ವಿಟರ್ ಪೇಜ್ ನಲ್ಲಿ ಈ ಫೋಟೋ ಹಾಕಿ ಸಂಭ್ರಮಿಸಿತ್ತು..ಹಾಗಾಗಿ ಚೋಟ ಮಫ್ಲರ್ ಮ್ಯಾನ್ನ್ನ, ಆಮ್ ಆದ್ಮಿ ಪಕ್ಷ
ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು.
ಪ್ರಮಾಣ ವಚನ ಸಮಾರಂಭದ ವೇದಿಕೆಗೆ ಆಗಮಿಸುತ್ತಿದ್ದಂತೆ ಎಲ್ರೂ ಲಿಟಲ್ ಮಫ್ಲರ್ ಮ್ಯಾನ್, ಲಿಟಲ್ ಮಫ್ಲರ್ ಮ್ಯಾನ್ ಕಂಡು ಹರ್ಷ ವ್ಯಕ್ತ ಪಡಿಸಿದ್ರು..








