ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾರಂಗಕ್ಕೆ ರೀ ಎಂಟ್ರಿಕೊಟ್ಟಿದ್ದು, ಸದ್ಯ ವಕೀಲ್ ಸಾಬ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದು ಮೆಗಾ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಇದೀಗ ಅಭಿಮಾನಿಗಳ ಎದೆಬಡಿತ ಹೆಚ್ಚಿಸುವ ಸುದ್ದಿಯೊಂದು ಹೊರಬಿದ್ದಿದೆ.
ಪವನ್ ಕಲ್ಯಾಣ್ ಸಿನಿಮಾದಲ್ಲಿ ರಾಮ್ ಚರಣ್!
ಹೌದು..! ವಕೀಲ್ ಸಾಬ್ ಬಾಲಿವುಡ್ ನ ಪಿಂಕ್ ಸಿನಿಮಾದ ರಿಮೇಕ್. ಬಾಲಿವುಡ್ ನಲ್ಲಿ ಅಮಿತಾಬ್ ಬಚ್ಚನ್ ಅಭಿನಯಿಸಿದ್ದ ಪಾತ್ರದಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ನಂತರ ಪವನ್ ಹಿಸ್ಟಾರಿಕಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷ ಅಂದರೆ ಚಿತ್ರದಲ್ಲಿ ಅಣ್ಣ ಚಿರಂಜೀವಿ ಪುತ್ರ ರಾಮ್ ಚರಣ್ ಕೂಡ ಕಾಣಿಸಿಕೊಳ್ಳುತ್ತಿದ್ದಾರಂತೆ.
ಖ್ಯಾತ ನಿರ್ದೇಶಕ ಕ್ರಿಶ್ ಪವನ್ ಕಲ್ಯಾಣ್ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಸದ್ಯ ಕ್ರಿಶ್, ಚಿತ್ರದ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.
ಪವನ್ ಕಲ್ಯಾಣ್ ಅಭಿನಯಿಸುವ ಹಿಸ್ಟಾರಿಕಲ್ ಸಿನಿಮಾ ಮೊಘಲ್ ಸಾಮ್ರಾಜ್ಯದ ಕಥೆಯಂತೆ. ಈ ಚಿತ್ರದ ವಿಶೇಷ ಪಾತ್ರಕ್ಕೆ ಈಗಾಗಲೆ ರಾಮ್ ಚರಣ್ ಅವರನ್ನು ವಿಶೇಷ ಪಾತ್ರಕ್ಕೆ ಆಹ್ವಾನಿಸುವ ಬಗ್ಗೆ ಪವನ್ ಕಲ್ಯಾಣ್ ಜೊತೆ ಚರ್ಚೆ ಮಾಡಿದೆಯಂತೆ ಚಿತ್ರತಂಡ. ಕಥಾನಾಯಕನ ಹಿನ್ನಲೆಯನ್ನು ವಿವರಿಸುವ ಪಾತ್ರಧಾರಿಯಾಗಿ ರಾಮ್ ಚರಣ್ ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯ ರಾಮ್ ಚರಣ್ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.








