ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಗ್ಗೆ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ವಿಧಾನ ಪರಿಷತ್ ನಲ್ಲಿ 7 ಸ್ಥಾನಗಳು ಖಾಲಿ ಆಗಲಿವೆ. ನಾಸೀರ್ ಅಹ್ಮದ್, ಜಯಮ್ಮ, ಎಂ.ಸಿ.ವೇಣುಗೋಪಾಲ, ಎಂ.ಎಸ್ ಬೋಸ್ ರಾಜ್, ಹೆಚ್,ಎಂ.ರೇವಣ್ಣ, ಟಿ.ಏ.ಶರವಣ, ಡಿ.ಯು .ಮಲ್ಲಿಕಾರ್ಜುನ ಅವರ ಅಧಿಕಾರಾವಧಿ ಮುಗಿಯಲಿದೆ. ಹಾಗಾಗಿ ಖಾಲಿ ಆಗಲಿರುವ 7 ಸ್ಥಾನಕ್ಕೆ ಜೂನ್ 29 ರಂದು ಚುನಾವಣೆ ನಡೆಯಲಿದೆ.
ಜೂನ್ 11ಕ್ಕೆ ಅಧಿಸೂಚನೆ ಹೊರಬೀಳಿದೆ. ಜೂನ್ 18 ರಂದು ನಾಮಪತ್ರ ಸಲ್ಲಕೆಗೆ ಕಡೇ ದಿನವಾಗಿರಲಿದೆ. ಜೂನ್ 19 ರಂದು ನಾಮಪತ್ರ ಪರಿಶೀಲನಡ ನಡೆಯಲಿದೆ. 22 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಲಿದೆ. ಇದಾದ ಬಳಿಕ ಜೂನ್ 29 ರಂದು ಮತದಾನ ನಡೆಯಲಿದೆ. ಅದೇ ದಿನ ಸಂಜೆ ಫಲಿತಾಂಶ ಹೊರಬೀಳಲಿದೆ.








